ಲೈಂಗಿಕ ಕಿರುಕುಳ ನೀಡಿದ್ದ ಉಪನ್ಯಾಸಕನ ಬಂಧನ

Arrest crime
Published on

ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಉಪನ್ಯಾಸಕನನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಕಾಲೇಜು ಒಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೊಬೈಲ್‌ಗೆ ಅದೇ ಕಾಲೇಜಿನ ಉಪನ್ಯಾಸಕ ಅಶ್ಲೀಲ ಚಿತ್ರಗಳನ್ನು, ವಿಡಿಯೋಗಳನ್ನು, ಮೆಸೇಜ್‌ಗಳನ್ನು ಕಳುಹಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಮನೆಯವರಿಗೆ ವಿಷಯ ತಿಳಿಸಿದರೆ ಇಂಟರ್‌ನಲ್ ಮಾರ್ಕ್ಸ್ ನೀಡುವುದಿಲ್ಲವೆಂದು, ಅನುತ್ತೀರ್ಣಗೊಳಿಸುವುದಾಗಿ ಹೆದರಿಸುತ್ತಿದ್ದ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಲಷ್ಕರ್ ಪೊಲೀಸರು ಇತ್ತೀಚೆಗೆ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಉಪನ್ಯಾಸಕ ಆರೋಪಿಯನ್ನು ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net