ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಆದರ್ಶ ಯುವಕರು ಅಳವಡಿಸಿಕೊಳ್ಳಲಿ

GOODWIL DAY
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸದ್ಭಾವನಾ ದಿನದಲ್ಲಿ ಉಪನ್ಯಾಸಕ ಬಾಳಪ್ಪ ಸುಳೇಕಲ್ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಚಾರ್ಯ ಬಜರಂಗಬಲಿ, ಪ್ರಾಧ್ಯಾಪಕರಾದ ಮರ್ವಿನ್ ಡಿಸೋಜಾ, ಗೋಪಾಲರೆಡ್ಡಿ ಮಾದಿನಾಳ, ಮಾರುತೇಶ, ದೇವೇಂದ್ರಪ್ಪ, ಮಾದಿನಾಳಪ್ಪ ಇತರರಿದ್ದರು.
Published on

ಕನಕಗಿರಿ: ಸದೃಢ ರಾಷ್ಟ್ರ ನಿರ್ಮಾಣಕ್ಕೆ ಯುವಕರು ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ವೀರೇಶ ಹೇಳಿದರು.

ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸದ್ಭಾವನಾ ದಿನದಲ್ಲಿ ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ರಾಷ್ಟ್ರೀಯ ಐಕ್ಯತೆ, ಸೌಹಾರ್ದ, ಸಾಮರಸ್ಯ ಮತ್ತು ಶಾಂತಿಯನ್ನು ಕಾಪಾಡಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.

ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಉಪನ್ಯಾಸಕ ಬಾಳಪ್ಪ ಸುಳೇಕಲ್ ಬೋಧಿಸಿದಿರು. ಪ್ರಾಚಾರ್ಯ ಬಜರಂಗಬಲಿ, ಪ್ರಾಧ್ಯಾಪಕರಾದ ಮರ್ವಿನ್ ಡಿಸೋಜಾ, ಗೋಪಾಲರೆಡ್ಡಿ ಮಾದಿನಾಳ, ಮಾರುತೇಶ, ದೇವೆಂದ್ರಪ್ಪ, ಮಾದಿನಾಳಪ್ಪ ಇತರರಿದ್ದರು.

ಬ್ಲಾಕ್ ಕಾಂಗ್ರೆಸ್ ಕಚೇರಿ: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸದ್ಭಾವನಾ ದಿನದಲ್ಲಿ ಬ್ಲಾಕ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ ಮಾತನಾಡಿ, ಚಿಕ್ಕ ವಯಸ್ಸಿಗೆ ಪ್ರಧಾನಿಯಾಗಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜೀವ್‌ಗಾಂಧಿ ಅವರು, ತಮ್ಮ ತಾಯಿ ಇಂದಿರಾ ಗಾಂಧಿ ಸಾವಿನ ನಂತರ ಸಾರ್ವತ್ರಿಕ ಚುನಾವಣೆಗೆ ಕರೆ ನೀಡಿದರು.

ಆಗಿನ ಚುನಾವಣೆಯಲ್ಲಿ 508 ಲೋಕಸಭಾ ಕ್ಷೇತ್ರಗಳ ಪೈಕಿ 401 ಕ್ಷೇತ್ರಗಳಲ್ಲಿ ಬಹುಮತ ಪಡೆದು ಜನರಿಗೆ ಹತ್ತಿರವಾಗಿದ್ದರು. ರಾಜಕೀಯ ಕುಟುಂಬದಲ್ಲಿ ಜನಿಸಿದರೂ ಅವರು, ರಾಜಕೀಯದಿಂದ ದೂರವಿದ್ದು, ಅನಿವಾರ್ಯ ಹಾಗೂ ಇಷ್ಟವಿಲ್ಲದೇ ಇಂದಿರಾಗಾಂಧಿ ಸಾವಿನ ನಂತರ ರಾಜಕೀಯಕ್ಕೆ ಧುಮಿಕಿದರು ಎಂದರು. ಪಪಂ ಸದಸ್ಯರಾದ ಶರಣೇಗೌಡ, ರಾಜಾಸಾಬ್ ನಂದಾಪುರ, ಕಂಠಿರಂಗ ನಾಯಕ, ಅನಿಲ್ ಬಿಜ್ಜಳ, ಪ್ರಮುಖರಾದ ಶರಣಪ್ಪ ಭತ್ತದ್, ವಿರುಪಾಕ್ಷಿ ಆಂಧ್ರ, ಪಾಮಣ್ಣ ಅರಳಿಗನೂರು, ಖಾದರ್‌ಬಾಷಾ ಗುಡಿಹಿಂದ್ಲ, ಶಾಂತಪ್ಪ ಬಸರಿಗಿಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net