ಉಪನ್ಯಾಸ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ಸರ್​ ಸಿದ್ಧಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ಸರ್​. ಸಿದ್ಧಪ್ಪ ಕಂಬಳಿ ಪ್ರತಿಷ್ಠಾನ ದತ್ತಿ ನಿಮಿತ್ತ ಸೆ. 11ರಂದು ಬೆಳಗ್ಗೆ 11 ಗಂಟೆಗೆ ಸರ್​. ಸಿದ್ಧಪ್ಪ ಕಂಬಳಿ ಕಾನೂನು ಕಾಲೇಜಿನ ಸಭಾಭವನದಲ್ಲಿ ಸರ್​. ಸಿದ್ದಪ್ಪ ಕಂಬಳಿ ಅವರ ಸಾಮಾಜಿಕ ನ್ಯಾಯ ಕುರಿತು ಉಪನ್ಯಾಸ ಏರ್ಪಡಿಸಿದೆ.
ಹಿರೇಮಲ್ಲೂರ ಈಶ್ವರನ್​ ಪ.ಪೂ ಕಾಲೇಜಿನ ಅಧ್ಯಾಪಕ ಡಾ. ಈರಣ್ಣ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು. ಡಾ. ಎಸ್​.ಆರ್​. ಮಂಜುಳಾ, ಸರ್​. ಸಿದ್ಧಪ್ಪ ಕಂಬಳಿ ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ತೋಡಕರ ಉಪಸ್ಥಿತರಿರುವರು. ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸುವರು. ಬೆಳಗ್ಗೆ 10.30ಕ್ಕೆ ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಸರ್​. ಸಿದ್ಧಪ್ಪ ಕಂಬಳಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net