

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಎಚ್. ಎಚ್. ಸಿನ್ನೂರ ದತ್ತಿ ನಿಮಿತ್ತ ಏ. 4ರಂದು ಸಂಜೆ 6 ಗಂಟೆಗೆ ರಾ.ಹ. ದೇಶಪಾಂಡೆ ಭವನದಲ್ಲಿ ಸಂದಿವಾತ ಮತ್ತು ಹೊಮಿಯೋಪಥಿ ಪರಿಹಾರ ಕುರಿತು ಉಪನ್ಯಾಸ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಿದೆ.
ಡಾ. ಬಿ.ಡಿ. ಜತ್ತಿ ಹೋಮಿಯೋಪಥಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಪ್ರಾಧ್ಯಾಪಕ ಡಾ. ಮಹಾದೇವ ಹಳ್ಳಿಕೇರಿ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು. ಅತಿಥಿಯಾಗಿ ಡಾ. ಆನಂದ ಪಾಂಡುರಂಗಿ ಆಗಮಿಸುವರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ಮಹಾಂತಯ್ಯ ಮಠಪತಿ ಸನ್ಮಾನ ಸ್ವೀಕರಿಸುವರು. ದತ್ತಿ ದಾನಿಗಳಾದ ಡಾ. ಪಾರ್ವತಿ ಮತ್ತು ಸುರೇಶ ಹಾಲಭಾವಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.