ಉಪನ್ಯಾಸ ಇಂದು

WEB LOGO
Published on

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಮಹಾಲಿಂಗಮ್ಮ ನಿಂಗಪ್ಪ ಸಾವಳಗಿ ದತ್ತಿ ನಿಮಿತ್ತ ಮಾ. 29ರಂದು ಸಂಜೆ 6 ಗಂಟೆಗೆ ಸಂಘದ ರಾ.ಹ. ದೇಶಪಾಂಡೆ ಭವನದಲ್ಲಿ ಮಹಾನ್​ ಮಹಿಳೆ ಶರಣೆ ಅಕ್ಕ ನಾಗಲಾಂಬಿಕೆ ಕುರಿತು ಉಪನ್ಯಾಸ ಏರ್ಪಡಿಸಿದೆ.

ಕೆಎಲ್​ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವೀಣಾ ಯಲಿಗಾರ ಉಪನ್ಯಾಸಕರಾಗಿ ಆಗಮಿಸುವರು. ಡಾ. ಸಿ.ಜಿ. ಪ್ರಶಾಂತ ಅತಿಥಿಯಾಗಿ ಆಗಮಿಸುವರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net