ಉಪನ್ಯಾಸ ಇಂದು

WEB LOGO
Published on

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಹೊಸಳ್ಳಿಯ ಶ್ರೀ ಬೂದೀಶ್ವರ ಸ್ವಾಮೀಜಿ ದತ್ತಿ ನಿಮಿತ್ತ ಮಾ. 5ರಂದು ಸಂಜೆ 6 ಗಂಟೆಗೆ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಉಪನ್ಯಾಸ ಏರ್ಪಡಿಸಿದೆ.

ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜ ಸಾನ್ನಿಧ್ಯ ವಹಿಸುವರು. ಕಾಲೇಜು ಶಿಕ್ಷಣ ಇಲಾಖೆ ವಿಶ್ರಾಂತ ಜಂಟಿ ನಿರ್ದೇಶಕ ಡಿ. ಎಂ. ನಿಡವಣಿ ಅವರು ಅಶೋಕ ನಿಡವಣಿ ಅವರ ಸಾಧನೆ ಮತ್ತು ಕೊಡುಗೆ: ಒಂದು ಸ್ಮರಣೆ ವಿಷಯ ಕುರಿತು ಉಪನ್ಯಾಸ ನೀಡುವರು. ದತ್ತಿದಾನಿ ಪ್ರಭಾ ನಿಡವಣಿ ಉಪಸ್ಥಿತರಿರುವರು. ವಿಶ್ರಾಂತ ಪ್ರಾಚಾರ್ಯ ಬಿ. ಎಂ. ಹುರಕಡ್ಲಿ ಅಧ್ಯಕ್ಷತೆ ವಹಿಸುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net