ಉಪನ್ಯಾಸ ಇಂದು

WEB LOGO
Published on

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಕುಸುಮ ವಿಠ್ಠಲರಾವ್​ ದೇಶಪಾಂಡೆ ಸ್ಮರಣಾರ್ಥ ದತ್ತಿ ನಿಮಿತ್ತ ಫೆ. 17ರಂದು ಸಂಜೆ 6 ಗಂಟೆಗೆ ಅಮ್ಮನೆಂಬ ಅಂತರಂಗ ಉಪನ್ಯಾಸ ಹಾಗೂ ಶ್ರೇಷ್ಠ ತಾಯಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದೆ.

ನಾಟಕಕಾರ ಡಾ. ದಿವಾಕರ ಹೆಗಡೆ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು. ಶ್ರೇಷ್ಠ ತಾಯಿ ಗೌರವ ಸನ್ಮಾನವನ್ನು ಅನುರಾಧಾ ವೆಂಕಟೇಶ ಪ್ರಭು ಸ್ವೀಕರಿಸುವರು. ದತ್ತಿದಾನಿ ಡಾ. ರಾಜನ್​ ದೇಶಪಾಂಡೆ ಉಪಸ್ಥಿತರಿರುವರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net