

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪವು ಜ. 18ರಂದು ಸಂಜೆ 6 ಗಂಟೆಗೆ ರಾ. ಹ. ದೇಶಪಾಂಡೆ ಭವನದಲ್ಲಿ ಸೌರ ವಿದ್ಯುತ್ ಉತ್ಪಾದನಾ ಅವಕಾಶಗಳು ಮತ್ತು ಸಬ್ಸಿಡಿ ಲಭ್ಯತೆ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ.
ರಾಮದುರ್ಗ ಗ್ರೀನಲ್ಯಾಂಡ್ ಬಯೋಟೆಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾಲಚಂದ್ರ ಜಾಬಶೆಟ್ಟಿ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು. ಜೆಎಸ್ಎಸ್ ಕಾಲೇಜಿನ ಪ್ರೊ. ಟಿ.ಎಂ. ಶ್ರೀಧರ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.