

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ವಿದ್ಯಾ ವಾಚಸ್ಪತಿ ಡಾ. ಪಂಚಾಕ್ಷರಿ ಹಿರೇಮಠ ಜನ್ಮದಿನ ದತ್ತಿ ನಿಮಿತ್ತ ಡಾ. ಪಂಚಾರಿ ಹಿರೇಮಠ ಅವರ ಸ್ವಾತಂತ್ರ್ಯ ಹೋರಾಟ ಮತ್ತು ಸಾಹಿತ್ಯ ಕುರಿತು ಜ. 6ರಂದು ಸಂಜೆ 6 ಗಂಟೆಗೆ ರಾ.ಹ. ದೇಶಪಾಂಡೆ ಭವನದಲ್ಲಿ ಉಪನ್ಯಾಸ ಏರ್ಪಡಿಸಿದೆ.
ಬಿಸರಹಳ್ಳಿಯ ಪವನಕುಮಾರ ಪ್ರಭುದೇವ ಕಮ್ಮಾರ ಉಪನ್ಯಾಸಕರಾಗಿ ಆಗಮಿಸುವರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ಶಂಕರ ಹಲಗತ್ತಿ ತಿಳಿಸಿದ್ದಾರೆ.