

ಧಾರವಾಡ: ವಕೀಲರ ದಿನ, ಹಿರಿಯ ನ್ಯಾಯವಾದಿ ಎಂ. ಜಿ. ಅಗಡಿ ಸಂಸ್ಮರಣೆ ಅಂಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘವು ಡಿ. 3ರಂದು ರಾ.ಹ. ದೇಶಪಾಂಡೆ ಭವನದಲ್ಲಿ ಕಾನೂನು ವೃತ್ತಿ: ಅವಕಾಶಗಳು-ಸವಾಲುಗಳು ಉಪನ್ಯಾಸ ಏರ್ಪಡಿಸಿದೆ.
ಅತಿಥಿಗಳಾಗಿ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ಕಾನೂನು ನಿಖಾಯದ ಡೀನ ಡಾ. ಎಂ. ವಿಶ್ವನಾಥ ಆಗಮಿಸುವರು. ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚುವರಿ ಅಡ್ವೋಕೇಟ ಜನರಲ್ ಜೆ.ಎಂ. ಗಂಗಾಧರ ಅಧ್ಯಕ್ಷತೆ ವಹಿಸುವರು ಎಂದು ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.