ಉಪನ್ಯಾಸ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಸಿ.ಆರ್​. ಯರವಿನತೆಲಿಮಠ ದತ್ತಿ ನಿಮಿತ್ತ ಅ. 10ರಂದು ಸಂಜೆ 6 ಗಂಟೆಗೆ ರಾ.ಹ. ದೇಶಪಾಂಡೆ ಭವನದಲ್ಲಿ ಶೂನ್ಯ ಸಂಪಾದನೆಯ ಅನುವಾದ: ಸಾಮಾಜಿಕ ಇತಿಹಾಸದ ಒಳನೋಟಗಳು ಕುರಿತು ಉಪನ್ಯಾಸ ಏರ್ಪಡಿಸಿದೆ.
ತುಮಕೂರು ವಿಶ್ವ ವಿದ್ಯಾಲಯದ ಇಂಗ್ಲಿಷ ಪ್ರಾಧ್ಯಾಪಕ ಡಾ. ಎನ್​.ಎಸ್​. ಗುಂಡೂರ ಉಪನ್ಯಾಸಕರಾಗಿ ಆಗಮಿಸುವರು. ಹಿರಿಯ ವೈದ್ಯ ಡಾ. ಎಸ್​.ಆರ್​. ರಾಮನಗೌಡರ ಅಧ್ಯಕ್ಷತೆ ವಹಿಸುವರು. ಡಾ. ಸಿ.ಆರ್​. ಯರವಿನತೆಲಿಮಠ ಹಾಗೂ ಬೆಳಗಾವಿಯ ಡಾ. ಗುರುದೇವಿ ಹುಲೆಪ್ಪನವರಮಠ ಗೌರವ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net