

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂದ ಕಲಾ ಮಂಟಪವು ಮೇ 29ರಂದು ಸಂಜೆ 6 ಗಂಟೆಗೆ ಸಂದ ರಾ.ಹ. ದೇಶಪಾಂಡೆ ಭವನದಲ್ಲಿ ಶ್ರೀ ಕೃಷ್ಣ ಪಾರಿಜಾತದಲ್ಲಿ ಭಗವದ್ಗೀತೆ ಉಪನ್ಯಾಸ ಹಾಗೂ ಶ್ರೀ ಕೃಷ್ಣ ಪಾರಿಜಾತ ಕೊರವಂಜಿ ಭಾಗ ಪ್ರದರ್ಶನ ಏರ್ಪಡಿಸಿದೆ.
ಕಲಾವಿದ ಮಲ್ಲಿಕಾರ್ಜುನ ದಾದನಟ್ಟಿ ಉಪನ್ಯಾಸ ನೀಡುವರು. ಬೈಲಹೊಂಗಲದ ಮಲ್ಲವ್ವ ಮ್ಯಾಗೇರಿ ಮತ್ತು ತಂಡದವರಿಂದ ಶ್ರೀ ಕೃಷ್ಣ ಪಾರಿಜಾತ ಕೊರವಂಜಿ ಭಾಗ ಪ್ರದರ್ಶನ ಜರುಗುವುದು. ಸಂದ ಉಪಾಧ್ಯೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ಸಂದ ಪ್ರಧಾನ ಕಾರ್ಯದಶಿರ್ ಶಂಕರ ಹಲಗತ್ತಿ ತಿಳಿಸಿದ್ದಾರೆ.