

ಮೈಸೂರು: ಶ್ರೀ ಪಾರ್ಶ್ವನಾಥ ಪೂಜಾ ಸೇವಾ ಟ್ರಸ್ಟ್ ವತಿಯಿಂದ ವಾರ್ಷಿಕ ಪೂಜಾ ರಜತ ಮಹೋತ್ಸವ ಆಚರಣೆ ಅಂಗವಾಗಿ ಜೆಎಲ್‌ಬಿ ರಸ್ತೆಯ ಜೈನ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಉಪನ್ಯಾಸ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿತು.
ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಒಂದು ವರ್ಷ ಕಾಲ ಸರಣಿ ಉಪನ್ಯಾಸ ಕಾರ್ಯಕ್ರಮದ ಪ್ರಯುಕ್ತ ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಅವರು ‘ವಡ್ಡಾರಾಧನೆ’ ವಿಷಯ ಕುರಿತು ನಾಲ್ಕನೇ ಉಪನ್ಯಾಸ ಮಾಲಿಕೆ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಜ್ಞಾನಭಾರತಿ ಮಹಿಳಾ ಸಮಾಜದ ವತಿಯಿಂದ ಜೈನ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯಾರಾದ ಜಾಹ್ನವಿ (ಪಿಯುಸಿ), ಅನುಪಲ್ಲವಿ (ದ್ವಿತೀಯ ಪದವಿ), ನಿಸ್ಮಯ (ಎಂಎಸ್ಸಿ) ಅವರನ್ನು ಪುರಸ್ಕರಿಸಲಾಯಿತು.
ಪ್ರಮುಖರಾದ ಎಸ್.ಬಿ. ವಿಜಯಕುಮಾರ್ ಪಂಡಿತ್, ನಿಲಯದ ಅಧ್ಯಕ್ಷ ಲಕ್ಷ್ಮೀರಮಣ, ಕಾರ್ಯದರ್ಶಿ ಶಾಮಾನಂದ ಸಾಗರ್, ಸದಸ್ಯ ನಮಿತೇಜ, ಪಾರ್ಶ್ವನಾಥ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎಂ.ಪಿ.ನಾಭಿರಾಜ್, ಸುಧಾಕರ್, ಪ್ರಾಯೋಜಕರಾದ ಡಾ.ಎಂ. ಎಸ್. ಪದ್ಮಾ ಇತರರಿದ್ದರು. 2026 ಮಾರ್ಚ್‌ವರೆಗೆ ಪ್ರತಿ ತಿಂಗಳ ಎರಡನೇ ಭಾನುವಾರ ಸಂಜೆ 4 ರಿಂದ 5.30ರವರೆಗೆ ಸರಣಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.