ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಎಚ್.ಆರ್.ಸುಜಾತಾ ಸಲಹೆ

Lecture series Mandya
Published on

ಮಂಡ್ಯ: ಇಂದಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸುವುದರ ಜತೆಗೆ ಜೀವನದ ಮೌಲ್ಯ ಹೆಚ್ಚಿಸುವ ಅಗತ್ಯವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಎಚ್.ಆರ್.ಸುಜಾತಾ ಹೇಳಿದರು.

ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಅಭಿನವ ಭಾರತಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಅಭಿನವ ಭಾರತಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಚಕೋರ ಉಪನ್ಯಾಸ ಮಾಲಿಕೆ-7 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಕೋರ ಉಪನ್ಯಾಸ ಮಾಲಿಕೆ ಮೂಲಕ ಹದಿಹರೆಯ ವಿದ್ಯಾರ್ಥಿಗಳಿಗೆ ಒಂದಷ್ಟು ಉಪಯುಕ್ತ ಸಾಹಿತ್ಯ ಅಭಿರುಚಿ ಬೆಳೆಸುವುದು, ಬದುಕಿನ ಮೌಲ್ಯಗಳ ಬಗ್ಗೆ ಬೆಳೆಕು ಚೆಲ್ಲುವುದು ಧ್ಯೇಯವಾಗಿದೆ. ಮೀನು ಹಿಡಿಯುವಾತ ತನ್ನ ಹಸಿವು ನೀಗಿಸಲು ಕ್ರೌರ್ಯ ಮೆರೆಯುತ್ತಾನೆ. ಮೂಕಪ್ರಾಣಿ ಮೀನು ಮಾತನಾಡದೆ, ಪ್ರತಿಭಟಿಸದೆ ಕ್ರೌರ್ಯಕ್ಕೆ ಒಳಗಾಗುತ್ತದೆ. ಇದು ಒಂದು ಸಾಹಿತ್ಯದ ಸಾರಾಂಶ, ಜೀವನ ಸಾಗಿಸುವ ವಿಧಾನವನ್ನೇ ಸಾಹಿತ್ಯವನ್ನಾಗಿಸುವ ಬರಹಗಾರಿಕೆ ಅತ್ಯಾವಶ್ಯಕ ಎಂದು ಹೇಳಿದರು.

ಅಭಿನವ ಭಾರತಿ ವಿದ್ಯಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಕೀಲಾರ ಮಾತನಾಡಿ, ವಿದ್ಯಾರ್ಥಿಗಳು ದಿನಚರಿ ಪಠ್ಯಚಟುವಟಿಕೆಗಳೊಂದಿಗೆ ಸಾಹಿತ್ಯ, ಕಲೆ, ಸುಸಂಸ್ಕೃತ ಲಕ್ಷಣಗಳನ್ನು ಮೈಗೂಡಿಸಿಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದರು.

‘ಸಾಹಿತ್ಯ ಮತ್ತು ಜೀವನ ಮೌಲ್ಯ’ ಕುರಿತು ಮಾತನಾಡಿದ ಸಹ ಪ್ರಾಧ್ಯಾಪಕ ಆನಂದ್ ಗೋಪಾಲ್, ಜೀವನದೊಂದಿಗೆ ಸಾಹಿತ್ಯವೇ ಹೊರತು ಸಾಹಿತ್ಯವೇ ಜೀವನವಲ್ಲ. ನಮ್ಮ ಮೊದಲ ಆದ್ಯತೆ ಜೀವನವಾಗಿದೆ. ಮನುಷ್ಯನ ಜೀವನವು ವೈವಿಧ್ಯತೆಗಳಿಂದ ಕೂಡಿದೆ. ಮೂಲ ಸೌಕರ್ಯಗಳೊಂದಿಗೆ ಸದಾ ಹೊಸತನವನ್ನು ಬಯಸುತ್ತದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಬದುಕು ಸಂಕೀರ್ಣತೆಯಿಂದ ಕೂಡಿದೆ. ಬಿಕ್ಕಟ್ಟು ಇಕ್ಕಟ್ಟುಗಳಿಂದ ಕೂಡಿದೆ. ಸಾಹಿತ್ಯಕ್ಕೂ ಜೀವನಕ್ಕೂ ರುಚಿ ಮತ್ತು ಅಭಿರುಚಿ, ಅಭಿವ್ಯಕ್ತಿತ್ವವಿದೆ ಎಂದು ತಿಳಿಸಿದರು.

ಪ್ರಾಂಶುಪಾಲ ಬಿ.ಎನ್ ಜನಾರ್ದನ್, ನವೋದಯ ಪರೀಕ್ಷಾ ತರಬೇತಿ ಶಿಕ್ಷಕಿ ಎಚ್.ಆರ್.ಕನ್ನಿಕಾ, ಚಕೋರ ಉಪನ್ಯಾಸ ಮಾಲಿಕೆ ಜಿಲ್ಲಾ ಸಹ ಸಂಚಾಲಕಿ ಡಾ.ಕೆ.ಎಲ್.ದಿವ್ಯಾ, ಸಂಘಟಕ ಕೀಲಾರ ಕೃಷ್ಣೇಗೌಡ, ಸುಗಮಸಂಗೀತ ಗಾಯಕ ನವೀನ್‌ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net