ಸರಣಿ ಉಪನ್ಯಾಸ ಮಾಲಿಕೆ

Dr. Sanjeev Kulkarni
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಏ. 5ರಿಂದ 9ರವರೆಗೆ ಪ್ರತಿದಿನ ಸಂಜೆ 6ರಿಂದ 8ರವರೆಗೆ ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞ ಡಾ. ಸಂಜೀವ ಕುಲಕರ್ಣಿ ಅವರಿಂದ `ಸಂತಾನೋತ್ಪತ್ತಿಯ ವಿಸ್ಮಯ' ವಿಷಯ ಕುರಿತು ಸರಣಿ ಉಪನ್ಯಾಸ ಮಾಲಿಕೆ ಏರ್ಪಡಿಸಿದೆ. 5ರಂದು ಜೀವಲೋಕದಲ್ಲಿ ಸಂತಾನೋತ್ಪತ್ತಿಯ ವಿಕಾಸ ಮತ್ತು ವೈವಿಧ್ಯ, 6ರಂದು ಮನುಷ್ಯರಲ್ಲಿ ಸಂತಾನೋತ್ಪತ್ತಿಯ ಅಂಗಗಳ ರಚನೆ ಮತ್ತು ಕಾರ್ಯ, 7ರಂದು ಗರ್ಭಧಾರಣೆ ಮತ್ತು ಬಸಿರು, 8ರಂದು ಹೆರಿಗೆ- ಸಹಜ ಮತ್ತು ಸಿಸೇರಿಯನ್, 9ರಂದು ಬಾಣಂತನ ವಿಷಯ ಕುರಿತು ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net