ಉಪನ್ಯಾಸ ಕಾರ್ಯಕ್ರಮ ಇಂದು

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ಆ. 12ರಂದು ಸಂಜೆ 6 ಗಂಟೆಗೆ ಸಂಘದ ರಾ.ಹ. ದೇಶಪಾಂಡೆ ಭವನದಲ್ಲಿ ದಿ. ಪಾರ್ವತೆಮ್ಮ ಹೊಂಬಳ ದತ್ತಿ ನಿಮಿತ್ತ ಗ್ರಂಥಪಾಲಕರ ದಿನಾಚರಣೆ ಹಾಗೂ ಗ್ರಂಥಗಳು ಜೀವನದ ಕನ್ನಡಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ.
ಅತಿಥಿ ಉಪನ್ಯಾಸಕರಾಗಿ ಆಕಾಶವಾಣಿ ವಿಶ್ರಾಂತ ನಿರ್ದೇಶಕ ಡಾ. ಬಸು ಬೇವಿನಗಿಡದ ಆಗಮಿಸುವರು. ಮುಂಬೈ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್​.ಕೆ. ಸವಣೂರ ಮತ್ತು ಕೆ. ಶಿವರಾಜ ಸನ್ಮಾನ ಸ್ವೀಕರಿಸುವರು. ದತ್ತಿದಾನಿ ಜಿ.ಬಿ. ಹೊಂಬಳ ಉಪಸ್ಥಿತರಿರುವರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net