ತುಳು ಜನಜೀವನ, ಸಂಸ್ಕೃತಿಯ ಅರಿವು ಅತ್ಯಗತ್ಯ

Upanyasa
Published on

ಡಾ.ರಾಮದಾಸ ಪ್ರಭು ಅಭಿಪ್ರಾಯ

ಮಧ್ಯಕಾಲೀನ ರಾಜಪ್ರಭುತ್ವದ ನೆಲೆ ಉಪನ್ಯಾಸ

ವಿಜಯವಾಣಿ ಸುದ್ದಿಜಾಲ ಉಡುಪಿ

ತುಳುನಾಡು ಸುದೀರ್ಘ ಇತಿಹಾಸ ಹೊಂದಿದ್ದು, ಸ್ಥಳೀಯವಾಗಿ ಆಳುಪರು ಸಾವಿರಕ್ಕೂ ಹೆಚ್ಚು ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. ಮಧ್ಯಕಾಲೀನ ತುಳುನಾಡಿನಲ್ಲಿ ಈ ಮನೆತನಗಳು ತುಳು ಸಂಸ್ಕೃತಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ. ಆ ಕುರಿತು ಅರಿವು ಅತ್ಯಗತ್ಯ ಎಂದು ಡಾ. ಜಿ.ಶಂಕರ ಸರ್ಕಾರಿ ಕಾಲೇಜಿನ ಇತಿಹಾಸ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ರಾಮದಾಸ ಪ್ರಭು ಅಭಿಪ್ರಾಯಪಟ್ಟರು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಇತಿಹಾಸ ವಿಭಾಗದಿಂದ ಇತ್ತೀಚೆಗೆ ಆಯೋಜಿಸಿದ್ದ ತುಳುನಾಡಿನ ಮಧ್ಯಕಾಲೀನ ರಾಜಪ್ರಭುತ್ವದ ನೆಲೆಗಳು ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ನಾಡಿಗೆ ವಿಶೇಷ ಕೊಡುಗೆ

ಭೌಗೋಳಿಕವಾಗಿಯೂ ವಿಶಾಲವಾಗಿರುವ ತುಳುನಾಡು ಸಾಂಸ್ಕೃತಿಕವಾಗಿಯೂ ಭಿನ್ನತೆ ಹೊಂದಿದೆ. ಮಧ್ಯಕಾಲೀನ ರಾಜಪ್ರಭುತ್ವಗಳು ತುಳುನಾಡಿನ ಬೆಳವಣಿಗೆಗೆ ತನ್ನದೇ ಆದ ವಿಶೇಷ ಕೊಡುಗೆ ನೀಡಿದೆ ಎಂದು ತಿಳಿಸಿದ ಅವರು, ಸ್ಥಳೀಯವಾಗಿ ತುಳುನಾಡಿನ ಜನಜೀವನ ಮತ್ತು ಸಂಸ್ಕೃತಿ ಬೆಳೆದು ಬಂದ ರೀತಿ, ಭೌಗೋಳಿಕ ವಿಷಯ ಹಾಗೂ ತುಳುನಾಡಿನ ಶ್ರೇಣೀಕೃತ ಸಮಾಜದ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ತೆಂಕನಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್​ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿಷ್ಣುಮೂರ್ತಿ ಪ್ರಭು ಮಾತನಾಡಿ, ಸಾಹಿತ್ಯಿಕ ಗೃಂಥಗಳು ತುಳುನಾಡಿನ ಇತಿಹಾಸ ಕಟ್ಟುವ ಬಗ್ಗೆ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ರಾಮು ಎಲ್​. ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಉಪನ್ಯಾಸಕಿ ಸುಬ್ಬಲಕ್ಷ್ಮೀ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇತಿಹಾಸ ವಿಭಾಗದ ಮುಖ್ಯಸ್ಥ ಮಹೇಶ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿಸದರು. ವಿದ್ಯಾರ್ಥಿ ಪ್ರವೀಣ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸೌಜನ್ಯಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net