ಆಳ್ವಾಸ್ ಕಾಲೇಜಿನಲ್ಲಿ ಚಿಂತನ-ಮಂಥನ ಉಪನ್ಯಾಸ

New Project (22)
Published on

ಮೂಡುಬಿದಿರೆ: ಭಾರತದಲ್ಲಿ ಸ್ಟೆಮ್ ಶಿಕ್ಷಣ ಮತ್ತು ವೈಜ್ಞಾನಿಕ ಚಿಂತನೆ ಕುರಿತು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಿಂತನ-ಮಂಥನ ಓದುಗರ ವೇದಿಕೆ ಅತಿಥಿ ಉಪನ್ಯಾಸ ನಡೆಯಿತು.

ಸಂಪನ್ಮೂಲ ವ್ಯಕ್ತಿ ಭೌತಶಾಸ್ತ್ರಜ್ಞ ಡಾ.ಶರತ್ ಅನಂತಮೂರ್ತಿ ಭಾರತೀಯ ಜಿಡಿಪಿಯ ಶೇ.0.3ರಷ್ಟು ಮಾತ್ರ ಸಂಶೋಧನೆಗೆ ಖರ್ಚು ಮಾಡಲಾಗುತ್ತಿದೆ ಎಂಬುದರ ಕುರಿತು ಆತಂಕ ವ್ಯಕ್ತಪಡಿಸಿ, ಹೆಚ್ಚು ಹೂಡಿಕೆ ಮಾಡಿದರೆ ಉತ್ತಮ ಸಂಶೋಧನೆ ಸಾಧ್ಯ. ವಿಶ್ವವಿದ್ಯಾಲಯಗಳು ಪಾರದರ್ಶಕವಾದ ಅಂತಾರಾಷ್ಟ್ರೀಯ ಸಂವಾದ ಹೊಂದಿರಬೇಕು ಹಾಗೂ ಸೃಜನಶೀಲತೆ, ಜ್ಞಾನ ವಿಕಾಸ ಮತ್ತು ಸಾಮಾಜಿಕ ಬದಲಾವಣೆಗಳ ಕೇಂದ್ರಗಳಾಗಿರಬೇಕು ಎಂದರು.

ಸಂಸ್ಥೆ ಟ್ರಸ್ಟಿ ವಿವೇಕ್ ಆಳ್ವ, ಚಿಂತನ-ಮಂಥನ ಕ್ಲಬ್ ಸಂಯೋಜಕ ಡಾ.ಶಶಿಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net