ವಿದ್ಯಾರ್ಥಿಗಳಿಗೆ ವೈಚಾರಿಕ ಪ್ರಜ್ಞೆ ಅವಶ್ಯ

Kanakagiri Lecture on Chakora Literature
ಕನಕಗಿರಿಯ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಲಾಯಿತು. ಅಕಾಡೆಮಿ ಸದಸ್ಯ ಅಜಮೀರ ನಂದಾಪುರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿರುಪಣ್ಣ ಕಲ್ಲೂರು, ಪ್ರಾಧ್ಯಾಪಕರಾದ ಡಾ.ವೀರೇಶ, ಡಾ.ಎಚ್.ಸಿ ಆಶೀಕಾ, ಮರ್ವಿನ್ ಡಿಸೋಜ ಇತರರಿದ್ದರು.
Published on

ಕನಕಗಿರಿ: ಕನ್ನಡ ಸಾಹಿತ್ಯದಲ್ಲಿನ ಸದ್ವತೆಯನ್ನು ಪ್ರತಿಯೊಬ್ಬರೂ ಆಸ್ವಾದಿಸಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಅಜಮೀರ ನಂದಾಪುರ ಹೇಳಿದರು.

ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಹಮ್ಮಿಕೊಂಡಿದ್ದ ಚಕೋರ ಸಾಹಿತ್ಯ ವಿಚಾರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಭಾಷೆ ಅರ್ಥವಾಗಬೇಕಾದರೆ ಸಾಹಿತ್ಯ ಓದಬೇಕು. ಕುವೆಂಪು ಹೇಳಿದಂತೆ ಎಲ್ಲ ರಂಗದ ವಿದ್ಯಾರ್ಥಿಗಳು ಮಸೀದಿ, ಮಂದಿರ, ಚರ್ಚ್‌ಗಳಿಂದ ಹೊರ ಬರಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಕನ್ನಡ ಸಾಹಿತ್ಯ, ನಾಡ ಕವಿಗಳ ಕೃತಿಗಳನ್ನು ಓದಿ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.

ಉಪನ್ಯಾಸಕಿ ಡಾ.ಪಾರ್ವತಿ ಮಾತನಾಡಿ, ಕುವೆಂಪು ಅವರ ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ದೃಷ್ಟಿ ಕೋನವಿದೆ. ವೈಚಾರಿಕೆ ಪ್ರಜ್ಞೆ ಕೇವಲ ಬರಹಗಳಲ್ಲಿ ಮಾತ್ರವಲ್ಲದೇ ಅವರ ವ್ಯಕ್ತಿತ್ವದಲ್ಲಿ ಅಡಗಿ ಹೋಗಿತ್ತು. ವಿದ್ಯಾರ್ಥಿದೆಸೆಯಲ್ಲಿರುವ ತಾವುಗಳೆಲ್ಲರೂ ಕುವೆಂಪು ಸಾಹಿತ್ಯವನ್ನು ಓದಿ ವಿವೇಕ ಪೂರ್ಣ ವಿವೇಚನೆ ಪಡೆಯಬೇಕು ಎಂದರು.

ಪ್ರಾಚಾರ್ಯ ಬಜರಂಗ ಬಲಿ, ಚಕೋರ ಸಂಚಾಲಕರಾದ ಸುರೇಶ ಕಲಾಪ್ರಿಯಾ, ತಾಲೂಕು ಕ.ಸಾ.ಪ. ಅಧ್ಯಕ್ಷ ಮೆಹಬೂಬ್ ಹುಸೇನ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ವಿರುಪಣ್ಣ ಕಲ್ಲೂರು, ಕಾಲೇಜಿನ ಪ್ರಾಧ್ಯಾಪಕರಾದ ಡಾ.ವೀರೇಶ, ಡಾ.ಎಚ್.ಸಿ ಆಶೀಕಾ, ಮರ್ವಿನ್ ಡಿಸೋಜ, ಲಲಿತಾ ಎನ್.ಕೆ, ರಕ್ಷೀತ್ ಎ, ಉಪನ್ಯಾಸಕರಾದ ಗೋಪಾಲರೆಡ್ಡಿ ಮಾದಿನಾಳ, ಬಾಳಪ್ಪ ಸುಳೇಕಲ್, ಸೈಯದ್ ಖಲಿಲುಲ್ಲಾ ಖಾದ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net