ಸಾಹಿತ್ಯ ಪರಿಷತ್ತಿನಿಂದ ಉಪನ್ಯಾಸ, ಸದಸ್ಯತ್ವ ಅಭಿಯಾನ

Oplus_16908288
ನಂಜನಗೂಡು ಈಶ್ವರ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನಿಂದ ಉಪನ್ಯಾಸ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
Published on

ನಂಜನಗೂಡು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ಪಟ್ಟಣದ ಈಶ್ವರ ಭವನದಲ್ಲಿ ಉಪನ್ಯಾಸ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಹಿತಿ ಕಳಲೆ ಗುರುಸ್ವಾಮಿ ಮಾತನಾಡಿ, ನಂಜನಗೂಡು ತಾಲೂಕು ಒಂದು ಐತಿಹಾಸಿಕ ಸ್ಥಳವಾಗಿದೆ. ಮುಖ್ಯವಾಗಿ ಶ್ರೀಕಂಠೇಶ್ವರ ಸ್ವಾಮಿ ಇಲ್ಲಿ ನೆಲೆಸಿದ್ದಾನೆ. ಜತೆಗೆ ತಾಲೂಕಿನಲ್ಲಿ ಹಲವು ದೇವಸ್ಥಾನಗಳು ಇವೆ. ಕಳಲೆ ಗ್ರಾಮದಲ್ಲೂ ಐತಿಹಾಸಿಕ ಶ್ರೀ ಲಕ್ಷ್ಮ್ಮೀಕಾಂತ ಸ್ವಾಮಿ ದೇವಸ್ಥಾನ ಇದ್ದು ಬಹಳ ಪುರಾತನವಾದ ದೇವಸ್ಥಾನವಾಗಿದೆ ಎಂದರು.

ನಂತರ ಡಾ.ವಿ.ರಂಗನಾಥ್ ಮಾತನಾಡಿ, ಮೈಸೂರು ಒಂದು ಸಂಸ್ಕೃತಿಕ ನಗರವಾಗಿದೆ ಎಂದರಲ್ಲದೆ, ವಿಶ್ವವಿಖ್ಯಾತ ಮೈಸೂರು ದಸರಾ ಹಾಗೂ ಮೈಸೂರು ರಾಜ್ಯವನ್ನು ಆಳಿದ ರಾಜ ಮಹಾರಾಜರ ಬಗ್ಗೆ ಸವಿವರವಾಗಿ ಬಣ್ಣಿಸಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಮಹಾಕವಿ ಎಚ್.ಎಸ್.ವೆಂಕಟೇಶ್‌ಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು. ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಮುಖಂಡರಾದ ಇಂದಿರೇಶ್, ನಂಜನಗೂಡು ಸತ್ಯನಾರಾಯಣ, ಡಾ.ವಿ.ರಂಗನಾಥ್, ಶಿಕ್ಷಕಿ ಸೌಮ್ಯಾ ಇಂದಿರೇಶ್ ರಂಜನಾ, ಎಸ್.ಗಿರೀಶ್, ಶೇಷಾದ್ರಿ ಸುಬ್ರಮಣ್ಯ, ಲಲಿತಾ ನಟೇಶ್, ಶೋಭಾ ನಾಗಶಯನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net