

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಯೋಧ್ಯಾಪತಿ ಶ್ರೀ ರಾಮಚಂದ್ರನ ಪ್ರತಿಷ್ಠಾಪನಾ ಮಹೋತ್ಸವ ನಿಮಿತ್ತ ಸಂವತ್ಸರ ಪರ್ಯಂತ ಶ್ರೀಮದ್ ರಾಮಾಯಣ ಉಪನ್ಯಾಸ ಸರಣಿ ಕಾರ್ಯಕ್ರಮವನ್ನು ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ವನಸಿರಿ ನಗರದ ರವೀಂದ್ರ ಹೆಬಸೂರ ನಿವಾಸದಲ್ಲಿ ಸೆ. 12, 13ರಂದು ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ.
ವಿಶೇಷ ಉಪನ್ಯಾಸಕರಾಗಿ ಕಲ್ಲೂರು ಮಧ್ವಮಠದ ಶ್ರೀ ವಿಶ್ವಧಿಪತಿ ಪ್ರಿಯತೀರ್ಥ ಶ್ರೀಪಾದರು ಆಗಮಿಸಲಿದ್ದು, ಬಾಲಕಾಂಡದ ಉತ್ತರಾರ್ಧ ಭಾಗದ ಕಥಾ ಪ್ರವಚನ ಮಾಡಲಿದ್ದಾರೆ. ಇದಕ್ಕೂ ಪೂರ್ವ ನಾರಾಯಣಿ ಭಜನಾ ಮಂಡಳಿಯಿಂದ ಭಜನೆ ಹಾಗೂ ಬಳಗದ ಸದಸ್ಯರಿಂದ ಶ್ರೀ ಹರಿವಾಯು ಗುರುಗಳ ಪಾರಾಯಣಗಳು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.