ಮುದ್ದುರಾಮ ಪ್ರತಿಷ್ಠಾನದ ವತಿಯಿಂದ ಜ.4 ಮತ್ತು 5ರಂದು ಶ್ರೀ ಸಿದ್ದೇಶ್ವರ ಸ್ಮಾರಕದಿಂದ ಉಪನ್ಯಾಸ

siddeswar shree
Published on

ಮೈಸೂರು: ಮುದ್ದುರಾಮ ಪ್ರತಿಷ್ಠಾನದ ವತಿಯಿಂದ ಜ.4 ಮತ್ತು 5ರಂದು ಸಂಜೆ 6ಕ್ಕೆ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಶ್ರೀ ಸಿದ್ದೇಶ್ವರ ಸ್ಮಾರಕ ಎರಡು ದಿನಗಳ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕೃಷಿಕರಾದ ಲಕ್ಷ್ಮೀಶ ತೋಳ್ಪಾಡಿ ಅವರು ಎರಡು ದಿನ ಪ್ರಕೃತಿ ಮತ್ತು ಅಧ್ಯಾತ್ಮ ವಿಷಯ ಕುರಿತು ಮಾತನಾಡುವರು. ಮೊದಲನೇ ದಿನ ದೀನಬಂಧು ಟ್ರಸ್ಟ್‌ನ ಕಾರ್ಯದರ್ಶಿ ಜಿ.ಎಸ್.ಜಯದೇವ ಅವರು ಪ್ರತಿಸ್ಪಂದನೆ ನೀಡುವರು. ಜ.5ರಂದು ನಿವೃತ್ತ ಮುಖ್ಯ ಇಂಜಿನಿಯರ್ ಶಂಕರ ದೇವನೂರು ಅವರು ಪ್ರತಿಸ್ಪಂದನೆ ನೀಡುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net