ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ನೆಮ್ಮದಿ ಮಾಸದ ಮಾತುಗಳು ಸಹಯೋಗದಲ್ಲಿ ನಗರದ ನೆಮ್ಮದಿ ಕುಟೀರದಲ್ಲಿ ಡಿ.1ರಂದು ಉಪನ್ಯಾಸ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
‘ಬದುಕಿನಲ್ಲಿ ಆಧ್ಯಾತ್ಮ ಪ್ರಸ್ತುತತೆ’ ಕುರಿತು ಸಾಹಿತಿ ಸವಿತಾ ಭಟ್ ಉಪನ್ಯಾಸ ನೀಡುವರು. ವಾಸುದೇವ ಶಾನಭಾಗರ ಎರಡು ಪುಸ್ತಕ ಬಿಡುಗಡೆಗೊಳ್ಳಲಿವೆ. ‘ಸೌಂದರ್ಯ ಸನ್ನಿಧಿ ಗೋವಾ’ ಪುಸ್ತಕವನ್ನು ಡಾ.ಜಿ.ಎ.ಹೆಗಡೆ ಸೋಂದಾ ಹಾಗೂ ಕೊಂಕಣಿ ಭಾಷೆಯ ಇತಿಹಾಸ ಪುಸ್ತಕವನ್ನು ಗಣಪತಿ ಭಟ್ಟ ವರ್ಗಾಸರ ಪರಿಚಯಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನಂತ ಹೆಗಡೆ ಬಾಳೆಗದ್ದೆ ವಹಿಸುವರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಸಮಿತಿ ಸದಸ್ಯ ಜಗದೀಶ ನಾ., ಕೃತಿಕಾರರಾದ ವಾಸುದೇವ ಶಾನಭಾಗ, ಕವಿ ಕೃಷ್ಣ ಪದಕಿ ಇತರರು ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.