ಭಾಷೆ-ಸಂಸ್ಕೃತಿಗಿದೆ ಅವಿನಾಭಾವ ಸಂಬಂಧ : ಡಾ.ಧನಂಜಯ ಕುಂಬ್ಳೆ ಪ್ರತಿಪಾದನೆ

New Project (51)
Published on

ಮೂಡುಬಿದಿರೆ: ಭಾಷೆ ಎನ್ನುವುದು ಒಂದು ಸಂಸ್ಕೃತಿಯ ಶರೀರ. ಮನುಷ್ಯನ ಶರೀರ ಮತ್ತು ಅದರ ಒಳಗಿರುವ ಜೀವಕ್ಕೆ ಹೇಗೆ ಅವಿನಾಭಾವ ಸಂಬಂಧವಿದೆಯೋ ಹಾಗೆ ಭಾಷೆ ಮತ್ತು ಸಂಸ್ಕೃತಿಗಿದೆ ಎಂದು ಮಂಗಳೂರು ವಿವಿಯ ಕನ್ನಡ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಹೇಳಿದರು.

ಮೂಡುಬಿದಿರೆ ಸಮಾಜ ಮಂದಿರ ಸಭಾದ 78ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಎರಡನೇ ದಿನ ‘ಭಾಷೆ ಮತ್ತು ಸಂಸ್ಕೃತಿ’ ವಿಷಯ ಕುರಿತು ಉಪನ್ಯಾಸ ನೀಡಿದರು.

ನ್ಯೂ ವೈಬ್ರೆಂಟ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಚಂದ್ರಶೇಖರ್ ರಾಜೇ ಅರಸ್ ಮುಖ್ಯ ಅತಿಥಿಯಾಗಿದ್ದರು. ಸಮಾಜಮಂದಿರದ ಸಭಾದ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದರು.

ಎಂ.ಹರೀಶ್ ಭಟ್(ಧಾರ್ಮಿಕ), ಆಡ್ಲಿನ್ ಜೆ.ಜತನ್ನ(ಶಿಕ್ಷಣ), ಗೌರಾ ಗೋವರ್ಧನ್(ಶಿಕ್ಷಣ, ಸಾಹಿತ್ಯ), ಹರ್ಷವರ್ಧನ್ ಪಡಿವಾಳ್(ಆಹಾರ ಉದ್ಯಮ), ಡಾ.ರವಿ ಕೋಟ್ಯಾನ್(ಛಾಯಾಗ್ರಹಣ), ಯಶವಂತ ಎಂ.ಜಿ.(ಸಂಗೀತ) ಅವರನ್ನು ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ದಸರಾ ಉತ್ಸವದ ಸಂಚಾಲಕ ಗಣೇಶ್ ಕಾಮತ್ ಎಂ. ನಿರೂಪಿಸಿದರು. ಮಯೂರ ಪ್ರತಿಷ್ಠಾನದಿಂದ ನೃತ್ಯ, ಪಟ್ಲ ಸತೀಶ್ ಶೆಟ್ಟಿ ನೇತೃತ್ವ, ರಕ್ಷಿತ್ ಪಡ್ರೆ ನಿರ್ದೇಶನದ ಪಾದ ಪ್ರತೀಕ್ಷಾ ಯಕ್ಷಗಾನ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net