ಉಪನ್ಯಾಸ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವು ಮಹಿಳೆ ಮತ್ತು ಸಮಾಜ ಸೇವೆ ಉಪನ್ಯಾಸ ಮತ್ತು ವಚನ ಗಾಯನ ಕಾರ್ಯಕ್ರಮವನ್ನು ಡಿ. 17ರಂದು ಸಂಜೆ 6 ಗಂಟೆಗೆ ರಾ.ಹ. ದೇಶಪಾಂಡೆ ಭವನದಲ್ಲಿ ಆಯೋಜಿಸಿದೆ.

ಧಾರವಾಡ ಲಯನ್ಸ್​ ಕ್ಲಬ್​ ನಿಕಟಪೂರ್ವ ಅಧ್ಯಕ್ಷೆ ಶೈಲಾ ಕರಗುದರಿ ಅವರು ಮಹಿಳೆ-ಲಯನ್ಸ್​ ಕ್ಲಬ್​-ಸಮಾಜ ಸೇವೆ ಕುರಿತು ಹಾಗೂ ರಾಪಿಡ್​ ಸಂಸ್ಥೆ ಸಿಇಒ ಮಾಳವಿಕಾ ಕಡಕೋಳ ಅವರು ಮಹಿಳೆ-ಎನ್​ಜಿಒ-ಸಮಾಜ ಸೇವೆ ಕುರಿತು ಉಪನ್ಯಾಸ ನೀಡುವರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ನಂತರ ವಿವಿಧ ಭಜನಾ ಮಂಡಳ ಸದಸ್ಯರು ವಚನ ಗಾಯನ ಪ್ರಸ್ತುಪಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net