ಬೀರೂರು ಪಿಎಸಿಎಸ್ ಬಿಜೆಪಿ ತೆಕ್ಕೆಗೆ

web 3
Published on

ಬೀರೂರು: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಐವರು ಅವಿರೋಧ, 7 ಮಂದಿ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ. ಗೆದ್ದವರಲ್ಲಿ 12 ಮಂದಿಯೂ ಬಿಜೆಪಿ ಬೆಂಬಲಿತರೇ ಇದ್ದಾರೆ

ಸಾಲೇತರ ಕ್ಷೇತ್ರದಿಂದ ಎಂ.ಕುಮಾರ್, ಸಾಲಗಾರ ಕ್ಷೇತ್ರದಿಂದ ಎ.ಬಿ.ಮಂಜುಳಾ, ಲಕ್ಷ್ಮ್ಮ್ಮು (ಮಹಿಳಾ ಮೀಸಲು), ಕೆ.ಆರ್.ಕಲ್ಲಪ್ಪ (ಎಸ್​ಸಿ), ಎಚ್.ವೆಂಕಟಗಿರಿಯಪ್ಪ (ಎಸ್​ಟಿ) ವಿರುದ್ಧ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಅವಿರೋಧ ಆಯ್ಕೆ ಘೊಷಿಸಲಾಯಿತು.

ಉಳಿದ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿ.ಎಂ.ಕಾಂತರಾಜ್, ಬಿ.ಎನ್.ಮಹೇಂದ್ರಕುಮಾರ್ (ಹಿಂದುಳಿದ ವರ್ಗ ಎ), ಕೆ.ಜಗದೀಶ್. ಎ.ಆರ್.ಲೋಕೇಶ್, ಎಂ.ಬಿ.ಗಿರೀಶ್, ಬಿ.ಸಿ.ಆನಂದ್, ಜಿ.ಸಿ.ಲಿಂಗರಾಜು (ಸಾಮಾನ್ಯ ಕ್ಷೇತ್ರ) ಜಯಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net