

ಬೆಳಗಾವಿ: ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಹುಮತ ಪಡೆದಿದ್ದೇವೆ. ವಿರೋಧಿಗಳು ಇನ್ನಾದರೂ ಅನವಶ್ಯಕ ಆರೋಪ ಬಿಟ್ಟು, ಬ್ಯಾಂಕ್ ಅಭಿವೃದ್ಧಿಗೆ ಸಲಹೆ ಕೊಡಲಿ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಕ್ಕೇರಿ, ರಾಮದುರ್ಗದಲ್ಲಿ ಹಿನ್ನಡೆಯಾಗಿದೆ. ಅಥಣಿ ಸ್ಪರ್ಧೆ ಇರಲಿಲ್ಲ. 7ರಲ್ಲಿ 4 ಸ್ಥಾನದಲ್ಲಿ ಗೆಲುವು ನಮ್ಮದಾಗಿದೆ. ಅವಿರೋಧ ಆಯ್ಕೆಯಾದವರು 9 ಜನ ನಮ್ಮವರೇ ಇದ್ದು, ಮುಂದಿನ ಐದು ವರ್ಷದಲ್ಲಿ ಬ್ಯಾಂಕ್ ಮಾದರಿಯಾಗಿ ಬೆಳೆಸುತ್ತಾರೆ ಎಂದರು.
ಚುನಾವಣೆಯಲ್ಲಿ ಜಾತಿ ಟ್ರಂಪ್ ಕಾರ್ಡ್ ಯಶಸ್ವಿಯಾಗಿಲ್ಲ. ಆದರೂ ಲಕ್ಷ$್ಮಣ ಸವದಿ, ಗೆದ್ದಿರುವ ನಾವೆಲ್ಲ ಒಂದೇ ಕೋಮಿನವರಿದ್ದೇವೆ. ನಾವೇ ಸೇರಿ ಯಾಕೆ ಆಡಳಿತ ಮಾಡಬಾರದೆಂಬ ವಿಚಾರವನ್ನು ಕೆಲ ಸದಸ್ಯರನ್ನು ಹೇಳಿದ್ದಾರಂತೆ. ಈ ಬಗಗಿನ ಚರ್ಚೆ ಅಗತ್ಯವಿಲ್ಲ. ಜನ ಯಾರು ಹೇಗೆ ಎನ್ನುವುದನ್ನು ಅರಿತುಕೊಂಡಿದ್ದಾರೆ. ಆದರೆ ಮುಗಿದು ಹೋಗಿರುವ ಹಳೇ ಪ್ರಕರಣಗಳನ್ನು ವಿರೋಧಿಗಳು ಚರ್ಚೆಗೆ ತಂದಿದ್ದಾರೆ. ಈ ಬಗ್ಗೆ ಮಾನನಷ್ಟ ಮೊಕದ್ದಮೆ ದಾಖಲಿಸುವ ವಿಚಾರ ಮಾಡಿದ್ದೇವೆ. ರಾಯಬಾಗ ತಾಲೂಕಿನ ಮತದಾರ ಪ್ರತಿನಿಧಿಗಳನ್ನು ಕೂಡಿಟ್ಟಿರುವ ಆರೋಪಕ್ಕೆ ಪುರಾವೆಗಳಿಲ್ಲ ಎಂದರು.
ಅಪೇಕ್ಸ್ ಬ್ಯಾಂಕಿಗೆ ಹಾಲುಮತದವರು: ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಡಿಸಿಸಿ ಬ್ಯಾಂಕಿಗೆ ಲಿಂಗಾಯತರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇವೆ. ಅಪೇಕ್ಸ್ ಬ್ಯಾಂಕಿಗೆ ಹಾಲುಮತದವರನ್ನು ಆಯ್ಕೆ ಮಾಡಿ ಕಳುಹಿಸುತ್ತೇವೆ. ಕಾಗವಾಡದ ರಾಜು ಕಾಗೆ ನಮ್ಮೊಂದಿಗೆ ಬರುತ್ತಾರೆ. ಗಣೇಶ ಹುಕ್ಕೇರಿ ಬರುವುದಾಗಿ ಹೇಳಿದ್ದಾರೆ ಎಂದರು.
50 ಕೊಟಿ ಬೆಟ್ಟಿಂಗ್: ಲಕ್ಷ$್ಮಣ ಸವದಿ ನಮ್ಮವರೇ ಅಧ್ಯಕ್ಷರಾಗುತ್ತಾರೆ ಎಂದಿದ್ದಾರೆ. ಇದಕ್ಕೆ 50 ಕೋಟಿ ರೂ. ಬೆಟ್ಟಿಂಗ್ ಕಟ್ಟಲು ನಾನು ರೆಡಿ. ಸವದಿ ಒಪ್ಪುತ್ತಾರಾ ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಎಲ್ಲ ಆರೋಪಗಳಿಗೆ ಉತ್ತರ ಕೊಡುತ್ತೇವೆ. ಕೆಲ ಗೌಪ್ಯ ವಿಷಯಗಳನ್ನು ಬಹಿರಂಗವಾಗಿ ಮಾತನಾಡಬಾರದು ಎಂದರು.
ಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಸಾಲದ ಬಗ್ಗೆಯೂ ಮಾತನಾಡಿದ್ದಾರೆ. ಈ ಬ್ಯಾಂಕಿನ 33 ಕೋಟಿ ರೂ. ಸಾಲ ಬಾಕಿ ಇದೆ. ಈ ಕಾರ್ಖಾನೆಯಿಂದಲೇ ಸಾಲ ವಸೂಲಾತಿ ಆರಂಭಿಸುತ್ತೇವೆ. ಯಾರ ಸಾಲ ಎಷ್ಟಿದೆ. ಅದನ್ನು ಹೇಗೆ ವಸೂಲಿ ಮಾಡುತ್ತೇವೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದರು.
ಶಾಸಕರಾದ ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ, ಬುಡಾ ಅಧ್ಯಕ್ಷ ಲಕ್ಷ$್ಮಣರಾವ ಚಿಂಗಳೆ, ಅಪ್ಪಾಸಾಹೇಬ ಕುಲಗುಡೆ, ಮಾಜಿ ಶಾಸಕ ಅರವಿಂದ ಪಾಟೀಲ, ರಾಹುಲ ಜಾರಕಿಹೊಳಿ, ನೀಲಕಂಠ ಕಪ್ಪಲಗುದ್ದಿ ಇತರರಿದ್ದರು.