

ಅಥಣಿ ಗ್ರಾಮೀಣ: ರಜೆ ಮೇಲೆ ಆಗಮಿಸಿದ್ದ ಯೋಧನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟು, ಇನ್ನೋರ್ವ ಯೋಧ ಗಾಯಗೊಂಡ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಲಕ್ಷ್ಮಣ ಹಿಂದೂರಾವ್ ಘೋರ್ಪಡೆ (24) ಮೃತ ಯೋಧ. ಸವಾರ ಸತೀಶ ಸಂಪತ ಘೋರ್ಪಡೆ (24) ಗಾಯಗೊಂಡ ಯೋಧ. ಈ ಇಬ್ಬರು ಸಹೋದರ ಸಂಬಂಗಳಾಗಿದ್ದು, ದ್ವಿಚಕ್ರ ವಾಹನದ ಮೇಲೆ ಬೆಳಗಾವಿಯಿಂದ ಹಾರೂಗೇರಿ ಮಾರ್ಗವಾಗಿ ಸ್ವ ಗ್ರಾಮಕ್ಕೆ ಆಗಮಿಸುತ್ತಿರುವಾಗ ಹಾರೂಗೇರಿ ಬಳಿ ಬೈಕ್ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ. ಗಾಯಾಳುವಿಗೆ ಹಾರೂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಹಾರಾಷ್ಟ್ರದ ಸಾಂಗಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರುಣಾಚಲ ಪ್ರದೇಶದ 15 ಮರಾಠ ಇನ್‌ೆಂಟ್ರಿಯಲ್ಲಿ ಲಕ್ಷ್ಮಣ ಘೋರ್ಪಡೆ ಸೇವೆ ಸಲ್ಲಿಸುತ್ತಿದ್ದರೆ, ಸತೀಶ ಘೋರ್ಪಡೆ ಅವರು ಉತ್ತರಾಖಂಡದಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಜೆ ಮೇಲೆ ಸ್ವಗ್ರಾಮಕ್ಕೆ ಆಗಮಿಸಿದ್ದರು. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೋಧ ಘೋರ್ಪಡೆ ಪಾರ್ಥಿವ ಶರೀರವನ್ನು ಹಾರೂಗೇರಿಯಿಂದ ಸ್ವ ಗ್ರಾಮಕ್ಕೆ ಕರೆತಂದು ಗ್ರಾಮದ ಮುಖ್ಯ ರಸ್ತೆಯಲ್ಲಿ ಮಾಜಿ ಯೋಧರು ಹಾಗೂ ಗ್ರಾಮದ ಯುವಕರು ಸೇರಿ ಮೆರವಣಿಗೆ ಮಾಡಿದರು. ಅಲ್ಲಿಂದ ಅವರ ತೋಟದ ಗದ್ದೆಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಥಣಿ ಪೊಲೀಸರು, ಕಂದಾಯ ಇಲಾಖೆ ಅಕಾರಿಗಳು, ಬೆಳಗಾವಿ ಮರಾಠ ಲೈಟ್ ಇನ್‌ೆಂಟ್ರಿ ಯೋಧರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.