ದುಶ್ಚಟ ಬಿಟ್ಟು ಉತ್ತಮ ಜೀವನ ಸಾಗಿಸಿ

tdl 12-1 shri
ತೇರದಾಳ ತಾಲೂಕಿನ ಗೋಲಭಾಂವಿ ಗ್ರಾಮದಲ್ಲಿ ಅಯ್ಯಪ್ಪಸ್ವಾಮಿ ಅಗ್ನಿಪೂಜೆ ಮತ್ತು ಮಹಾಪೂಜೆ ಕಾರ್ಯಕ್ರಮದಲ್ಲಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧ್ದರಾಮ ಪಂಡಿತಾರಾಧ್ಯರು ಆಶೀರ್ವಚನ ನೀಡಿದರು. ಡಾ. ವಿಶ್ವಪ್ರಭು ಶಿವಾಚಾರ್ಯರು, ಬಬಲಾದಿಯ ಅಪ್ಪಯ್ಯ ಹಿರೇಮಠ ಇತರರಿದ್ದರು.
Published on

ತೇರದಾಳ: ಅಯ್ಯಪ್ಪ ಸ್ವಾಮಿಯು ಬೇಡಿದ್ದನ್ನು ಕರುಣಿಸುವ ದೈವವಾಗಿದ್ದಾನೆ. ದುಷ್ಟರ ಸಂಹಾರ ಮತ್ತು ಶಿಷ್ಟರ ರಕ್ಷಕನಾಗಿ ಸ್ವಾಮಿಯು ನಮ್ಮೆಲ್ಲರನ್ನು ಕಾಯುತ್ತಾನೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯರು ಹೇಳಿದರು.

ತಾಲೂಕಿನ ಗೋಲಬಾಂವಿ ಗ್ರಾಮದಲ್ಲಿ ಅಯ್ಯಪ್ಪಸ್ವಾಮಿ ಭಕ್ತ ಸೇವಾ ಸಮಿತಿ ಆಶ್ರಯದಲ್ಲಿ ಬುಧವಾರ ನಡೆದ 18ನೇ ವರ್ಷದ ಅಗ್ನಿಪೂಜೆ ಹಾಗೂ ಮಹಾಪೂಜೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಅಯ್ಯಪ್ಪ ಮಾಲಾಧಾರಿಗಳು ವ್ರತಾಚರಣೆಯಲ್ಲಿ ತಮ್ಮೆಲ್ಲ ದುಶ್ಚಟಗಳನ್ನು ಬಿಟ್ಟು ವ್ರತ ಆಚರಿಸುತ್ತಾರೆ. ಆದರೆ, ವ್ರತ ಮುಗಿದ ನಂತರ ಮತ್ತೆ ದುಶ್ಚಟಗಳನ್ನು ಅಳವಡಿಸಿಕೊಳ್ಳದೆ ಉತ್ತಮ ಜೀವನ ನಡೆಸಬೇಕು ಎಂದು ತಿಳಿಸಿದರು.

ರಬಕವಿಯ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಮಾತನಾಡಿ, ಮನುಷ್ಯನು ತನ್ನಲ್ಲಿರುವ ಕಲ್ಮಶ ಗುಣಗಳನ್ನು ಬಿಟ್ಟು, ಹೊಸತನ ರೂಢಿಸಿಕೊಳ್ಳಲು ಭಾರತೀಯ ಸಂಪ್ರದಾಯದಲ್ಲಿ ವ್ರತಾಚರಣೆಗಳು ಪ್ರಧಾನವಾಗಿವೆ ಎಂದರು.

ಕೊಣ್ಣೂರ ಹೊರಗಿನಮಠದ ಡಾ. ವಿಶ್ವಪ್ರಭು ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ತೇರದಾಳ ಹಿರೇಮಠದ ಗಂಗಾಧರದೇವರು, ಬಬಲಾದಿಯ ಅಪ್ಪಯ್ಯ ಹಿರೇಮಠ, ರಾಜೇಂದ್ರಕುಮಾರ ಗುಡಗುಂಟಿಮಠ, ಭೀಮಶಿ ಹುನ್ನೂರ, ಶಿಕ್ಷಕ ಈರಣ್ಣ ಲಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net