

ಸಾಗರ: ಶಾಂತಾವೇರಿ ಗೋಪಾಲಗೌಡ ಕ್ರೀಡಾಂಗಣದಲ್ಲಿ ಮೂರು ದಿನ ಆಯೋಜಿಸಿದ್ದ 18 ವರ್ಷದೊಳಗಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಾಗರ ಸ್ಪೋರ್ಟ್ಸ್ ಅಕಾಡೆಮಿ ಬ್ಲಾಕ್ ತಂಡ ಮೊದಲ ಸ್ಥಾನ ಪಡೆದು ಪಾರಿತೋಷಕ ಹಾಗೂ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಸೀಮಿತ ಓವರ್ಗಳ ಪಂದ್ಯಾವಳಿಯಲ್ಲಿ ಬೆಂಗಳೂರಿನ ಮಾರುತಿ ಕ್ರಿಕೆಟ್ ಕ್ಲಬ್ ದ್ವಿತೀಯ ಹಾಗೂ ಸಾಗರ ಸ್ಪೋರ್ಟ್ಸ್ ಅಕಾಡೆಮಿ ವೈಟ್ ತಂಡ ತೃತೀಯ ಸ್ಥಾನ ಪಡೆದವು. ಸರಣಿ ಪುರುಷೋತ್ತಮರಾಗಿ ಎಸ್ಎಸ್ಎ ವೈಟ್ ತಂಡದ ಪ್ರಥಮ್ ಆರ್.ನಾಯ್ಡು ಆಯ್ಕೆಯಾದರು. ಉತ್ತಮ ಬ್ಯಾಟ್ಸ್ಮನ್ಗಳಾಗಿ ಅಭಿಷೇಕ್ ಶೇಟ್, ಗಣೇಶ್ ಮತ್ತು ಭುವನ್ ಆಯ್ಕೆಯಾದರು. ಉತ್ತಮ ಬೌಲರ್ ಆಗಿ ವಿಕಾಸ್, ಜಿ.ಎಸ್.ಸೃಜನ್ ಮತ್ತು ಸಮರ್ಥ್ ಅವರು ಪ್ರಶಸ್ತಿ ಪಡೆದರು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗ ನಾರಾಯಣಪ್ಪ, ಅಂತಾರಾಷ್ಟ್ರೀಯ ಮಟ್ಟದ ವೀಕ್ಷಕ ವಿವರಣೆಗಾರ ಎಂ. ರಾಘವೇಂದ್ರ, ಸಾಗರ ಸ್ಪೋರ್ಟ್ಸ್ ಅಕಾಡೆಮಿಯ ರವಿ ನಾಯ್ಡು, ಐ.ಎನ್.ಸುರೇಶ್ ಬಾಬು, ಡಿ.ಗಣೇಶ್, ಹರ್ಷ, ಸಿದ್ದರಾಜು ಸಂದೇಶ್, ಕಿರಣ್, ಬೆಂಗಳೂರು ಮಾರುತಿ ಕ್ರಿಕೆಟ್ ಕ್ಲಬ್ನ ಸೈಯದ್ ಇದ್ದರು.