ನ೨೦ ರಿಂದ ೩೦ರವರೆಗೆ ಲೆದರ್ ಬಾಲ್ ಕ್ರಿಕೆಟ್

madhu
Published on

ಮಡಿಕೇರಿ: ಮರ್ಕೆರ ಯೂತ್ ಕ್ರಿಕೆಟ್ ಕ್ಲಬ್(ಎಂ.ವೈ.ಸಿ.ಸಿ.) ವತಿಯಿಂದ ಜಿಲ್ಲಾ ಮಟ್ಟದ ಟಿ೨೦ ಲೆದರ್ ಬಾಲ್ ಕ್ರಿಕೆಟ್ ಚಾಂಪಿಯನ್ ಶಿಪ್ ನ೨೦ ರಿಂದ ೩೦ರವರೆಗೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ಉಪಾಧ್ಯಕ್ಷ ಪೊನ್ನಚ್ಚನ ಮಧು ತಿಳಿಸಿದರು.


ನಾಕೌಟ್ ಮಾದರಿಯಲ್ಲಿ ಕ್ರೀಕೆಟ್ ನಡೆಯಲಿದ್ದು, ವಿಜೇತ ತಂಡಕ್ಕೆ ರೂ೩೦ ಸಾವಿರ ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ೨೦ ಸಾವಿರ ಹಾಗೂ ಟ್ರೋಫಿ ಬಹುಮಾನವಾಗಿ ನೀಡಲಾಗುತ್ತದೆ. ಪ್ರತಿ ಪಂದ್ಯಕ್ಕೂ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಜತೆಗೆ ವಿವಿಧ ವೈಯುಕ್ತಿಕ ಬಹುಮಾನ ನೀಡಲಾಗುತ್ತದೆ. ರೂ೫ ಸಾವಿರ ಪ್ರವೇಶ ಶುಲ್ಕ ಪಾವತಿಸಿ ನ ೧೩ರೊಳಗೆ ತಂಡವನ್ನು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.


ಜಿಲ್ಲೆಯ ಕ್ರೀಡಾಪಟುಗಳು ಪಂದ್ಯಾಟದಲ್ಲಿ ಭಾಗವಹಿಸಬಹುದು. ಕ್ರೀಡಾಪಟು ಜಿಲ್ಲೆಯ ದಾಖಲೆಯಿದ್ದು ಬೇರೆಡೆ ನೆಲೆಸಿದ್ದರೆ ಜಿಲ್ಲೆಯ ಒಂದು ದಾಖಲೆ ನೀಡಿ ತಂಡದಲ್ಲಿ ಆಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ೯೪೮೦೩೧೮೨೧೩, ೮೬೬೦೭೨೩೧೭೦, ೮೩೧೦೧೨೮೭೯೦ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಹೇಳಿದರು.


ಮೈದಾನ ನಿರ್ವಹಣೆಗೆ ಒತ್ತಾಯ: ನಗರದ ಜಿಲ್ಲಾ ಕ್ರೀಡಾಂಗಣ ವ್ಯವಸ್ಥಿತವಾಗಿಲ್ಲದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಇರುವ ಒಂದು ಮೈದಾನ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಇದರಿಂದ ಕ್ರೀಡಾಪಟುಗಳಿಗೆ ಸಮಸ್ಯೆಯಾಗುತ್ತಿದೆ ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.


ಪಾಲೆಮಾಡುವಿನಲ್ಲಿ ನಿರ್ಮಾಣವಾಗಬೇಕಾದ ಕ್ರಿಕೆಟ್ ಸ್ಟೇಡಿಯಂ ಯಾವ ಹಂತದಲ್ಲಿದೆ ಎಂದು ಯಾರಿಗೂ ತಿಳಿಯುತ್ತಿಲ್ಲ. ಇದರ ನಿರ್ವಹಣೆಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧೀನ ಸ್ಥಳೀಯ ಕ್ಲಬ್‌ಗೆ ನೀಡಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಅಧ್ಯಕ್ಷ ಕಾಯಪಂಡ ಎಂ.ಉತ್ತಪ್ಪ, ಕಾರ್ಯದರ್ಶಿ ಎಂ.ಎಂ.ಸುನೀಲ್, ಸದಸ್ಯರುಗಳಾದ ಪ್ರಿನ್ಸ್ ಕುಶಾಲಪ್ಪ ಹಾಗೂ ಟಿ.ಆರ್.ಧ್ರುವ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net