ಗುತ್ತಿಗೆ ನೌಕರರಿಗೆ 17 ತಿಂಗಳಿಂದ ವೇತನವೂ ಇಲ್ಲ, ಇಪಿಎಫ್ ಮೊತ್ತವೂ ಸಂದಾಯವಾಗಿಲ್ಲ

PROTEST GVT
ಬಾಕಿ ವೇತನ ಮತ್ತು ಇಪಿಎ್ ಮೊತ್ತ ಪಾವತಿಸುವಂತೆ ಒತ್ತಾಯಿಸಿ ಲೋಕೋಪಯೋಗಿ ಇಲಾಖೆ ಹೊರಗುತ್ತಿಗೆ ನೌಕರರು ಗಂಗಾವತಿ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು. ಹಿರಿಯ ನೌಕರ ಅಬ್ದುಲ್ ಸತ್ತಾರ್, ಸಂಗಪ್ಪ,ಯಮನಪ್ಪ, ಬಿ.ಮಲ್ಲೇಶ, ಶ್ರೀನಿವಾಸ, ಬಸವರಾಜ ಇತರರಿದ್ದರು.
Published on

ಗಂಗಾವತಿ: ಬಾಕಿ ವೇತನ ಮತ್ತು ಇಪಿಎ್ ಮೊತ್ತ ಪಾವತಿಸುವಂತೆ ಒತ್ತಾಯಿಸಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕಿನ ಪ್ರವಾಸಿ ಮಂದಿರ, ಸರ್ಕ್ಯೂಟ್ ಹೌಸ್ ಮತ್ತು ಉಪವಿಭಾಗ ಕಚೇರಿಯಲ್ಲಿ ಹೊರಗುತ್ತಿಗೆ ನೌಕರರು ನಗರದ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ, ಎಇಇ ಸುದೇಶಕುಮಾರಗೆ ಮನವಿ ಸಲ್ಲಿಸಿದರು.

ಹಿರಿಯ ನೌಕರರಾದ ಅಬ್ದುಲ್ ಸತ್ತಾರ್ ಮತ್ತು ಸಂಗಪ್ಪ, ಮಾತನಾಡಿ, ಹೊರಗುತ್ತಿಗೆ ನೌಕರರಿಗೆ ವೇತನ ನೀಡುವಲ್ಲಿ ಟೆಂಡರ್ ಪಡೆದ ಕಂಪನಿ ವಿಲವಾಗಿದ್ದು, ಕಾರ್ಮಿಕ ಇಲಾಖೆ ಮಾರ್ಗಸೂಚಿಯಂತೆ ವಿತರಿಸುತ್ತಿಲ್ಲ. 17 ತಿಂಗಳ ವೇತನ ಬಾಕಿಯಿದ್ದು, ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಇತ್ತೀಚೆಗೆ 14 ನೌಕರರ 6 ತಿಂಗಳ ವೇತನ ನೀಡಿದ್ದು, ಇಪಿಎ್, ಇಸಿಐ ಹಣ ಪಾವತಿಸಿಲ್ಲ. ವೇತನ ದೊರೆಯದಿದ್ದರಿಂದ ಕುಟುಂಬ ನಿರ್ವಹಣೆಗೆ ತೊಂದರೆಯಾಗಿದ್ದು, ಮಕ್ಕಳ ಶಾಲೆ ಶುಲ್ಕ ಭರಿಸಲಾಗುತ್ತಿಲ್ಲ. ಕುಟುಂಬದ ಹಿತದೃಷ್ಟಿಯಿಂದ ಬಾಕಿ ವೇತನ ಸೇರಿ ಇತರ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದರು.

ನೌಕರರಾದ ಯಮನಪ್ಪ, ಬಿ.ಮಲ್ಲೇಶ, ಶ್ರೀನಿವಾಸ, ಬಸವರಾಜ, ಹೂವಪ್ಪ, ರಸೂಲ್ ಖಾನ್, ವಸೀಮ್‌ಖಾನ್, ದಾವಲ್‌ಸಾಬ್, ರವಿ, ವಿಶ್ವನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net