ಮಕ್ಕಳು ಇಷ್ಟಪಟ್ಟು ಓದಿದರೆ ಪರಿಪೂರ್ಣವಾಗಲಿದೆ ಕಲಿಕೆ

20250105_114318
ಅರಸೀಕೆರೆಯಲ್ಲಿ ಆಯೋಜಿಸಿದ್ದ ಪಾರ್ವತಮ್ಮ ಕಾನ್ವೆಂಟ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಲೋಕೇಶ್ ಕುಮಾರ್ ಮಾತನಾಡಿದರು. ಪೂರ್ಣಿಮಾ, ಕೊಟ್ರಯ್ಯ, ಮಂಜುಳಾ ಇತರರು ಇದ್ದರು.
Published on

ಅರಸೀಕೆರೆ: ಮಕ್ಕಳು ಇಷ್ಟಪಟ್ಟು ಖುಷಿಯಿಂದ ಓದಿದರೆ ಮಾತ್ರ ಪರಿಪೂರ್ಣ ಕಲಿಕೆ ಸಾಧ್ಯವಾಗಲಿದೆ ಎಂದು ಹೊಯ್ಸಳೇಶ್ವರ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪೂರ್ಣಿಮಾ ಹೇಳಿದರು.

ಪಟ್ಟಣದ ಪರಮೇಶ್ವರಪ್ಪ ಕಲ್ಯಾಣ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಪರಿಶ್ರಮದಿಂದ ವ್ಯಾಸಂತ ಮಾಡಿದರೆ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು.

ಹೈಕೋರ್ಟ್ ವಕೀಲ ಕೆ.ಎಸ್.ಲೋಕೇಶ್ ಕುಮಾರ್ ಮಾತನಾಡಿ, ಶಿಕ್ಷಣ ವಾಣಿಜ್ಯೋದ್ಯಮವಾಗಿ ಪರಿವರ್ತನೆಗೊಳ್ಳುತ್ತಿರುವ ಕಾಲಘಟ್ಟದಲ್ಲಿಯೂ ಪಾರ್ವತಮ್ಮ ಕಾನ್ವೆಂಟ್ ಸೇವಾ ಮನೋಭಾವ ಪ್ರದರ್ಶಿಸುತ್ತಿರುವುದು ಶ್ಲಾಘನೀಯ. ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಪಾಲಕರ ಸ್ನೇಹಿ ಶಾಲೆಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಕೊಟ್ರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯಲ್ಲಿ ಮಾತೃಭಾಷೆ ಕನ್ನಡದೊಂದಿಗೆ ಇಂಗ್ಲಿಷ್, ಹಿಂದಿಯನ್ನು ಕಲಿಸಲಾಗುತ್ತಿದೆ. ಸೇವಾ ಮನೋಭಾವದಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಮುಖ್ಯ ಶಿಕ್ಷಕಿ ಮಂಜುಳಾ ಶಾಲಾ ವಾರ್ಷಿಕ ವರದಿ ಮಂಡಿಸಿದರು. ಪಾಲಕರಾದ ಮಮತಾ, ವೆಂಕಟೇಶ್, ಕಾವ್ಯಾ ಮಾತನಾಡಿದರು. ಶಿಕ್ಷಕಿ ರಶ್ಮಿ ಇತರರು ಇದ್ದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net