ಹೊಸ ತಂತ್ರಜ್ಞಾನ ಕಲಿಕೆ ಅತ್ಯಗತ್ಯ

ಹುಣಸೂರು ನಗರದ ಛಾಯಾಗ್ರಾಹಕರ ಸಂಘದ ವತಿಯಿಂದ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ನಗರಸಭೆ ಅಧ್ಯಕ್ಷ ಎಸ್.ಶರವಣ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ರಾಮಸ್ವಾಮಿ, ಉಪಾಧ್ಯಕ್ಷ ದಾಮೋದರ್, ಸ್ಟೆರಿನ್, ಮಹೇಶ್, ಶಿವರಾಮು ಇತರರಿದ್ದಾರೆ.
ಹುಣಸೂರು ನಗರದ ಛಾಯಾಗ್ರಾಹಕರ ಸಂಘದ ವತಿಯಿಂದ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ನಗರಸಭೆ ಅಧ್ಯಕ್ಷ ಎಸ್.ಶರವಣ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ರಾಮಸ್ವಾಮಿ, ಉಪಾಧ್ಯಕ್ಷ ದಾಮೋದರ್, ಸ್ಟೆರಿನ್, ಮಹೇಶ್, ಶಿವರಾಮು ಇತರರಿದ್ದಾರೆ.
Published on

ಹುಣಸೂರು: ಛಾಯಾಗ್ರಹಣ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳು ದಾಂಗುಡಿಯಿಡುತ್ತಿದ್ದು, ಛಾಯಾಗ್ರಾಹಕರು ಕಾಲಕಾಲಕ್ಕೆ ಅಪ್‌ಡೇಟ್ ಆದಲ್ಲಿ ಮಾತ್ರ ಕ್ಷೇತ್ರದಲ್ಲಿ ಉಳಿಯಲು ಸಾಧ್ಯವಿದೆ ಎಂದು ನಗರಸಭೆ ಅಧ್ಯಕ್ಷ ಎಸ್.ಶರವಣ ಅಭಿಪ್ರಾಯಪಟ್ಟರು.

ನಗರದ ಛಾಯಾಗ್ರಾಹಕರ ಸಂಘದ ವತಿಯಿಂದ ಶನಿವಾರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸಿನಿಮಾಟೋಗ್ರಫಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರತಿ ಕ್ಷೇತ್ರದಲ್ಲಿ ಕೌಶಲಕ್ಕೆ ಉತ್ತಮ ಬೇಡಿಕೆ ಇದೆ. ನೂತನ ತಂತ್ರಜ್ಞಾನಗಳ ಆವಿಷ್ಕಾರ ಇಡೀ ವಿಶ್ವವನ್ನೇ ಮುಷ್ಟಿಯಲ್ಲಿ ಹಿಡಿಯುವಂತೆ ಮಾಡಿದೆ. ಅದರಲ್ಲೂ ಛಾಯಾಗ್ರಹಣ ಕ್ಷೇತ್ರ ದಿನದಿನಕ್ಕೂ ಬದಲಾವಣೆಯ ಪರ್ವವನ್ನೇ ಕಾಣುತ್ತಿದೆ. ಡಿಜಿಟಲ್ ಫೋಟೋಗ್ರಫಿ ಛಾಯಾಗ್ರಹಣವನ್ನು ಸುಲಭವಾಗಿಸಿದ ನಂತರ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಗಳು ಆಗಿವೆ. ಹಾಗಾಗಿ ಬದಲಾವಣೆ ಅರಿತು, ಅಪ್ಪಿಕೊಂಡು ಒಪ್ಪಿಕೊಂಡು ಮುನ್ನಡೆದಲ್ಲಿ ಮಾತ್ರ ವೃತ್ತಿಯನ್ನು ಉಳಿಸಿಕೊಳ್ಳುವ ಮತ್ತು ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಹುಣಸೂರಿನ ಸಂಘವು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಸಂಘದ ಅಧ್ಯಕ್ಷ ರಾಮಸ್ವಾಮಿ ಮಾತನಾಡಿ, ಸಂಘದ ಸದಸ್ಯರಿಗಾಗಿ ಆಧುನಿಕ ತಂತ್ರಜ್ಞಾನಗಳ ಕುರಿತಾಗಿ ಅರಿವು ಮೂಡಿಸಿ ತರಬೇತುಗೊಳಿಸಲು ನಿಕಾನ್ ಕಂಪನಿ ಸಹಯೋಗದೊಂದಿಗೆ ಕಾರ್ಯಾಗಾರ ಹಮ್ಮಿಕೊಂಡಿದ್ದ ಸದಸ್ಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ಯಾಮರಾದಲ್ಲಿ ಗಿಂಬಲ್ ಬಳಕೆ ಸೇರಿದಂತೆ ಹೊಸ ತಂತ್ರಜ್ಞಾನಗಳ ಕುರಿತು ನಿಕಾನ್ ಕಂಪನಿಯ ಸ್ಟೆರಿನ್, ಮಹೇಶ್, ಶಿವರಾಮು ಮಾಹಿತಿ ನೀಡಿದರು. ಉದ್ಯಮಿ ಶ್ರೀನಿಧಿ ಮಾತನಾಡಿದರು.

ಕಾರ್ಯಾಗಾರದಲ್ಲಿ ಕುಶಾಲನಗರದ ಮಹದೇವಪ್ಪ, ಪಿರಿಯಾಪಟ್ಟಣದ ಮೋಹನ್, ತಾಲೂಕು ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ದಾಮೋದರ್, ಕಾರ್ಯದರ್ಶಿ ಸುರೇಶ್, ಖಜಾಂಚಿ ಅರುಣ್‌ಕುಮಾರ್, ಸಂಘಟನಾ ಕಾರ್ಯದರ್ಶಿ ರಘು ಅಡಿಗನಹಳ್ಳಿ, ಮಾಧ್ಯಮ ವಕ್ತಾರ ಗಜೇಂದ್ರ, ನಿದೇಶಕರಾದ ಪಿ.ಸುರೇಶ್, ಲೋಕೇಶ್,ಯೋಗಾನಂದ್, ಶಿವರಾಜ್, ಕಾಂತರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net