ನಾಯಕತ್ವ ಗುಣ ಕಲಿಕೆ : ಗಿರಿಶಂಕರ ಸುಲಾಯ ಅನಿಸಿಕೆ : ಎನ್‌ಎಸ್‌ಎಸ್ ಶಿಬಿರ ಸಮಾರೋಪ

Kdb_leadership
Published on

ವಿಜಯವಾಣಿ ಸುದ್ದಿಜಾಲ ಕಡಬ

ಆಲಂಕಾರು ಶ್ರೀ ಭಾರತೀ ವಿದ್ಯಾಸಂಸ್ಥೆಯಲ್ಲಿ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಮಂಗಳವಾರ ನಡೆಯಿತು.

ಶ್ರೀ ಭಾರತೀ ವಿದ್ಯಾಸಂಸ್ಥೆಗಳ ಆಡಳಿತ ಸಮಿತಿ ಸದಸ್ಯ ಗಿರಿಶಂಕರ ಸುಲಾಯ ಸಮಾರೋಪ ಭಾಷಣ ಮಾಡಿ, ಎನ್ನೆಸೆಸ್ಸ್ ಶಿಬಿರಗಳು ನಾಯಕತ್ವ ಗುಣ, ಸಂವಹನ ಕಲೆ, ಇತ್ಯಾದಿ ಗುಣಗಳನ್ನು ಬೆಳೆಸುತ್ತವೆ ಎಂದರು.

ಶಿಬಿರ ನಿರ್ದೇಶಕ, ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ.ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ಸಮಾನತೆ, ಸಹಬಾಳ್ವೆಯನ್ನು ಕಲಿಸುತ್ತದೆ ಮತ್ತು ವಿದ್ಯಾರ್ಥಿಗಳಲ್ಲಿ ಎಲ್ಲರೂ ಒಂದೇ ಮನೆಯವರು ಎಂಬಂಥಹ ಭಾವನೆಯನ್ನು ಮೂಡಿಸುತ್ತದೆ ಎಂದರು.

ಶ್ರೀ ಭಾರತೀ ವಿದ್ಯಾಸಂಸ್ಥೆಗಳ ಸಂಚಾಲಕ ಗಂಗಾಧರ ಗೌಡ ಕುಂಡಡ್ಕ, ಉಪಾಧ್ಯಕ್ಷ ಈಶ್ವರ ಗೌಡ ಪಜ್ಜಡ್ಕ, ಕೋಶಾಧಿಕಾರಿ ರಾಮಚಂದ್ರ ಭಟ್ ಅತ್ರಿವನ, ಶ್ರೀ ಕ್ಷೇತ್ರ ಧ.ಗ್ರಾ.ಯೋ, ಕೊಯಿಲ ಒಕ್ಕೂಟದ ಅಧ್ಯಕ್ಷ ಸುಧೀಶ್ ಪಟ್ಟೆ, ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಆಶಾ, ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಸತೀಶ್ ಕುಮಾರ ಜಿ.ಆರ್, ಶಿಬಿರ ಅನುಷ್ಠಾನ ಸಮಿತಿ ಅಧ್ಯಕ್ಷ ಇಂದುಶೇಖರ ಶೆಟ್ಟಿ, ಶಿಬಿರ ಅನುಷ್ಠಾನ ಸಮಿತಿ ಸದಸ್ಯ ಗಣೇಶ್ ಹಿರಿಂಜ, ಶ್ರೀ ಭಾರತೀ ವಿದ್ಯಾಸಂಸ್ಥೆಗಳ ಆಡಳಿತ ಸಮಿತಿ ಸದಸ್ಯ ಶಿವಣ್ಣ ಕಕ್ವೆ ಮಾತನಾಡಿದರು. ಶಿಬಿರ ನಾಯಕ ಅಶ್ವಥ್ ಮತ್ತು ನಾಯಕಿ ಮಾನ್ಯ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ಶಿಬಿರಾಧಿಕಾರಿ ಕೀರ್ತನ್ ಶಿಬಿರದ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಕಿರಣ್, ಶಹನಿ, ಶ್ರೇಯ ಅನಿಸಿಕೆ ಹೇಳಿದರು. ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪ್ರಶಸ್ತಿ ಪತ್ರ ವಿತರಿಸಲಾಯಿತು. ಸಹಶಿಬಿರಾಧಿಕಾರಿ ಸುಜಾತ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ತಿಲಕಾಕ್ಷ ವಂದಿಸಿದರು. ಕಾಲೇಜಿನ ಉಪನ್ಯಾಸಕ ಚೇತನ್ ಎಂ.ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net