

ತರೀಕೆರೆ: ಕರಾಟೆ ಕಲಿಕೆ ಆತ್ಮರಕ್ಷಣೆಗೆ ಸಹಕಾರಿ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಪಟ್ಟಣದಲ್ಲಿ ಏರ್ಪಡಿಸಿದ್ದ 7ನೇ ಓಪನ್ ಸೌತ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ತುರ್ತು ಸನ್ನಿವೇಶದಲ್ಲಿ ರಕ್ಷಣಾತ್ಮಕ ಕಲೆ ಕರಾಟೆ ನೆರವಿಗೆ ಬರಲಿದೆ. ತರಬೇತುದಾರ ಸೈಯದ್ ರಿಯಾಜ್ ಸೇವಾ ಮನೋಭಾವನೆಯಿಂದ ಮಕ್ಕಳಿಗೆ ಕರಾಟೆ ಕಲಿಸುವ ಜತೆಗೆ 7ನೇ ಬಾರಿ ಸೌತ್ ಇಂಡಿಯಾ ಕರಾಟೆ ಚಾಂಪಿಯನ್ ಸ್ಪರ್ಧೆ ಆಯೋಜಿಸಿ ಹಿರಿಮೆ ಹೆಚ್ಚಿಸಿದ್ದಾರೆ. ಯುವಕರ ಜತೆ ಯುವತಿಯರು ಕರಾಟೆ ಕಲಿಯಲು ಮುಂದಾಗಬೇಕು ಎಂದರು.
ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್ ಮಾತನಾಡಿ, ತರಬೇತುದಾರ ಸೈಯದ್ ರಿಯಾಜ್ ಸಂಕಷ್ಟದ ನಡುವೆಯೂ ಕಳೆದ 30 ವರ್ಷಗಳಿಂದ ಮಕ್ಕಳಿಗೆ ಕರಾಟೆ ತರಬೇತಿ ನೀಡಿ ಮುಂದಿನ ಹಂತಕ್ಕೆ ತಯಾರಿ ಮಾಡುತ್ತಿದ್ದಾರೆ. ಪುರಸಭೆಯಿಂದ ಬಾಕ್ಸಿಂಗ್ ತರಬೇತಿಗೆ ಬೇಕಾದ ಸೂಕ್ತ ಜಾಗದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು. ರಾಜ್ಯ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ವಿನೋದ್, ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ್, ಪ್ರಮುಖರಾದ ಕುಮಾರಸ್ವಾಮಿ, ಬಾಲರಾಜ್, ಆರ್ೀ, ಕೌಶಿಕ್, ಮನು ಮತ್ತಿತರರಿದ್ದರು.