

ವಿಜಯಪುರ : ಹಿಂದಿ ಭಾಷೆ ಅಂತಾರಾಷ್ಟ್ರೀಯ ಭಾಷೆಯಾಗಿದೆ, ಇಂದಿನ ದಿನಮಾನಗಳಲ್ಲಿ ದೇಶದ ಏಕತೆ ಮತ್ತು ಭಾವನಾತ್ಮಕವಾಗಿ ಜನರನ್ನು ಒಂದು ಗೂಡಿಸಲು ಎಲ್ಲರೂ ಹಿಂದಿ ಕಲಿಯಬೇಕು ಎಂದು ಪ್ರಾಚಾರ್ಯ ಟಿ.ಆರ್. ಕುಲಕರ್ಣಿ ಸಲಹೆ ನೀಡಿದರು.ನಗರದ ವಿ.ಭ. ದರಬಾರ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿಂದಿ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಕೆ.ಡಿ. ಚವ್ಹಾಣ ಮಾತನಾಡಿ, ವಿಶ್ವದಲ್ಲಿ ಇಂಗ್ಲಿಷ್ ಮತ್ತು ಚೈನೀಸ್ ಭಾಷೆಗಳ ನಂತರ ಹಿಂದಿ ಭಾಷೆ ಅತೀ ಹೆಚ್ಚು ಬಳಕೆಯಲ್ಲಿದೆ. ಎಲ್ಲ ದೇಶ&ವಿದೇಶ, ವಿಶ್ವವಿದ್ಯಾಲಯಗಳು ಹಿಂದಿ ಭಾಷೆಯನ್ನು ಕಲಿಸಲು ಮುಂದೆ ಬರುತ್ತಿದ್ದು, ವಿದ್ಯಾರ್ಥಿಗಳು ಹಿಂದಿ ಕಲಿಯುವ ಜತೆಗೆ ಅದರ ಸದುಪಯೋಗಪಡೆದುಕೊಳ್ಳುವಂತೆ ತಿಳಿಸಿದರು.
ಎಂ.ಎಸ್. ಬಿರಾದಾರ ಮತ್ತು ಗುರುರಾಜ ಕುಲಕರ್ಣಿ ಉಪಸ್ಥಿತಿ ವಹಿಸಿದ್ದರು. ಉಪನ್ಯಾಸಕರಾದ ಅಶೋಕ ಸಣ್ಣಿಂಗಮ್ಮನವರ ಹಾಗೂ ನಾಗರಾಜ ಎ. ಹಿಂದಿ ಗೀತೆಗಳನ್ನು ಹಾಡಿದರು. ಹಿಂದಿ ಉಪನ್ಯಾಸಕ ಜಯಪ್ರಕಾಶ ಯಾದವ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಂತರ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
ವಿಜಯಪುರದ ವಿ.ಭ. ದರಬಾರ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ಹಿಂದಿ ದಿವಸ ಆಚರಿಸಲಾಯಿತು. ಟಿ.ಆರ್. ಕುಲಕರ್ಣಿ, ಜಯಪ್ರಕಾಶ ಯಾದವ, ಎಂ.ಎಸ್. ಬಿರಾದಾರ ಮತ್ತಿತರರಿದ್ದಾರೆ.