

ಗಂಗೊಳ್ಳಿ: ಎಸ್.ವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ ಕ್ಲಸ್ಟರ್‌ಮಟ್ಟದ ಕಲಿಕಾ ಹಬ್ಬ ಬುಧವಾರ ಜರುಗಿತು. ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಕಾರ್ಯಕ್ರಮ ಉದ್ಘಾಟಿಸಿದರು.
ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸಹಯೋಗ ವಹಿಸಿದ್ದವು. ಮುಖ್ಯ ಶಿಕ್ಷಕ ಜಿ.ವಿಶ್ವನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಬಿಆರ್‌ಪಿ ಸಂತೋಷ ಕುಮಾರ್ ಶೆಟ್ಟಿ, ಸಿಆರ್‌ಪಿಗಳಾದ ಪ್ರದೀಪ್ ಕುಮಾರ್ ಶೆಟ್ಟಿ, ಉಮೈ ಸಲ್ಮಾ, ಬಿಐಇಆರ್‌ಟಿ ಶಂಕರ ಕುಲಾಲ್ ಶುಭಾಶಂಸನೆಗೈದರು. ವಿವಿಧ ಶಾಲೆಗಳ ಮುಖ್ಯ ಶಿಕ್ಷಕಿಯರಾದ ಯಶೋದಾ, ಚಂದ್ರಕಲಾ ತಾಂಡೇಲ, ಶಿಕ್ಷಕಿಯರು ವಿದ್ಯಾರ್ಥಿಗಳಿದ್ದರು. ಮಾಲಾಶ್ರೀ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು.