

ಮಂಜೇಶ್ವರ: ಉದ್ಯಾವರ ತೋಟ ಜಿಎಂಎಲ್‌ಪಿ ಶಾಲೆ ಮಕ್ಕಳ ಕಲಿಕೋತ್ಸವ ಹಾಗೂ ಸನ್ಮಾನ ಸಮಾರಂಭ ಇತ್ತೀಚೆಗೆ ಜರುಗಿತು.
ಬೆಳಗ್ಗೆ ಶಾಲಾ ಮಕ್ಕಳು ಹಾಗೂ ಅಂಗನವಾಡಿ ವಿದ್ಯಾರ್ಥಿಗಳಿಂದ ವಿವಿಧ ಶೈಕ್ಷಣಿಕ ಕಲಿಕಾ ಚಟುವಟಿಕೆಗಳು ನಡೆಯಿತು. ಬಳಿಕ ಶಾಲಾ ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ ಅಬ್ದುಲ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ. ಉದ್ಘಾಟಿಸಿದರು. ಬಿಪಿಸಿ ಸುಮಾದೇವಿ, ಎಂಪಿಟಿ ಅಧ್ಯಕ್ಷೆ ಶಮೀಮಾ ಮುಳಿಂಜ, ಶಾಲಾ ಶಿಕ್ಷಕಿ ಐಶ್ವರ್ಯಾ, ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ ಅಭಿಲಾಷ್ ರಾವ್ ಶುಭಾಶಂಸನೆಗೈದರು. ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ., ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಯಿಂದ ಬಡ್ತಿ ಪಡೆದು ಪಟ್ಲ ಶಾಲೆಗೆ ಪಾಂ್ರಶುಪಾಲರಾಗಿ ಆಯ್ಕೆಯಾದ ರಾಜಗೋಪಾಲ ಕೆ. ಅವರನ್ನು ಗೌರವಿಸಲಾಯಿತು. ಮುಖ್ಯ ಶಿಕ್ಷಕ ಇಸ್ಮಾಯಿಲ್ ಮೀಯಪದವು ಸ್ವಾಗತಿಸಿದರು. ರವಿಶಂಕರ ನೆಗಳಗುಳಿ, ಮೋಹಿನಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಗಾಯತ್ರಿ ವಂದಿಸಿದರು.