

ವಿಜಯಪುರ : ಹಲವು ವ್ಯಕ್ತಿಗಳ ರಕ್ತ ಬಲಿದಾನದ ರೂಪವಾಗಿ ಭಾರತಕ್ಕೆ ಸ್ವಾತಂತ್ರ ಲಭಿಸಿದೆ. ಸಂಸ್ಕಾರ ಇಲ್ಲದ ಮನುಷ್ಯ ಇದ್ದು ಸತ್ತಂತೆ. ಆ ಸಂಸ್ಕಾರವನ್ನು ಗುರುಕುಲ ಶಾಲೆಯಲ್ಲಿ ನೀಡುತ್ತಿದ್ದು, ಉತ್ತಮ ಜ್ಞಾನದ ಜತೆಗೆ ಸಂಸ್ಕಾರವಂತರಾಗಬೇಕು ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯ ಅಸಗೋಡು ಜಯಸಿಂಹ ಹೇಳಿದರು.ನಗರದ ಎಆರ್ಜೆ ಗುರುಕುಲ ಶಾಲೆ ಮತ್ತು ಕಾಲೇಜಿನಲ್ಲಿ ಶುಕ್ರವಾರ 79ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್ ಬಳಕೆ ನಿಲ್ಲಿಸಿ ವಿದ್ಯಾಭ್ಯಾಸದ ಕಡೆಗೆ ಗಮನ ಹರಸಬೇಕು ಎಂದು ಸಲಹೆ ನೀಡಿದರು.
ಅತಿಥಿ ಡಾ. ಕಿರಣ ಚುಳಕೆ ಮಾತನಾಡಿ, ರಾಣಿ ಚನ್ನಮ್ಮ, ಭಗತ ಸಿಂಗ್, ಜವಾಹರಲಾಲ್ ನೆಹರು ಮುಂತಾದ ಸ್ವಾತಂತ್ರ ಹೋರಾಟಗಾರರು ತಮ್ಮ ಜೀವನವನ್ನು ಈ ದೇಶಕ್ಕಾಗಿ ಸಮರ್ಪಿಸಿದ್ದಾರೆ. ಅವರ ತ್ಯಾಗ ನಾವು ಎಂದಿಗೂ ಮರೆಯಬಾರದು ಎಂದರು.ಅಧ್ಯತೆ ವಹಿಸಿದ್ದ ಶಾಲೆಯ ಅಧ್ಯ ಸಂಜೀವ ಆಚಾರ್ಯ ಮದಬಾವಿ ಮಾತನಾಡಿದರು.
ಆಡಳಿತಾಧಿಕಾರಿ ವರುಣಕುಮಾರ ಕುಲಕರ್ಣಿ, ಉಪ ಪ್ರಾಚಾರ್ಯ ಶಾರುಖ ತಶಿಲ್ದಾರ ಮಾತನಾಡಿದರು. ಮಿತೀಶಾ ಸಿಂಗ್ವಿ ಸ್ವಾಗತಿಸಿದರು. ಆದ್ಯ ಅಕ್ಕಿ ನಿರೂಪಿಸಿದರು. ಮಿಶಾ ಉತ್ತಂಗಿ ವಂದಿಸಿದರು.ವಿನೀತಾ ಬನಸೋಡೆ, ವಿಠಲ ಬನಸೋಡೆ, ಬಾಪುರಾಯ ಮೆಡೇಗಾರ, ಬಿಕ್ರಮ ಮತ್ತಿತರರಿದ್ದರು.
ಫೋಟೋ : ಎಂಎಂ 16&18
ವಿಜಯಪುರದ ಎಆರ್ಜೆ ಗುರುಕುಲ ಶಾಲೆ ಮತ್ತು ಕಾಲೇಜನಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಅಸಗೋಡು ಜಯಸಿಂಹ ಮಾತನಾಡಿದರು. ಸಂಜೀವ ಆಚಾರ್ಯ, ಡಾ. ಕಿರಣ ಚುಳಕೆ ಮತ್ತಿತರರಿದ್ದಾರೆ.