ಮಕ್ಕಳಲ್ಲಿ ಕಲಿಕೆಯ ಅರಿವು ಮೂಡಿಸಿ

26SND-03
Published on

ಸಿಂಧನೂರು: ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಿಸಲು ಶಿಕ್ಷಕರು ಶ್ರಮವಹಿಸಬೇಕು. ಪಾಲಕರು ಕೂಡ ಮಕ್ಕಳ ಕಾಳಜಿ ವಹಿಸಬೇಕೆಂದು ಶಿಕ್ಷಣ ಇಲಾಖೆ ನೋಡಲ್ ಅಧಿಕಾರಿ ಅಮರೇಶ ಹೇಳಿದರು.

ಸುಕಾಲಪೇಟೆಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ತಾಯಂದಿರ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಮಕ್ಕಳಲ್ಲಿ ಕಲಿಕೆಯ ಅರಿವು ಮೂಡಿಸಬೇಕಿದ್ದು, ಇದಕ್ಕಾಗಿ ಆಸಕ್ತಿಕರ ಚಟುವಟಿಕೆಗಳನ್ನು ಮಾಡಿಸಬೇಕು. ಶಿಕ್ಷಕರಷ್ಟೇ ಪಾಲಕರ ಪಾತ್ರವೂ ದೊಡ್ಡದಿದೆ. ಮಕ್ಕಳ ಕಲಿಕೆ ಮತ್ತು ಆರೋಗ್ಯದ ಬಗ್ಗೆ ತಾಯಿ ಕಾಳಜಿ ವಹಿಸಬೇಕೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net