ಕಲಿತ ಶಾಲೆ ಎಂದಿಗೂ ಮರೆಯಬಾರದು

3dvk 6
ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಎಂ.ಕೆ. ಹುಬ್ಬಳ್ಳಿ ಕಲ್ಮೇಶ್ವರ ಹೈಸ್ಕೂಲ್ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನದಲ್ಲಿ ಶಾಲೆಯ ಗುರುಗಳು ಮತ್ತು ಆಡಳಿತ ಮಂಡಳಿಯವರನ್ನು ಸತ್ಕರಿಸಲಾಯಿತು. ದಿನೇಶ ಪಾಟೀಲ, ಎಸ್.ಎಸ್. ಗಂಗಾಧರಮಠ, ಜಿ.ಎಸ್. ಹಲಸಗಿ ಇತರರಿದ್ದರು.
Published on

ಬೆಳಗಾವಿ: ಬದುಕಿಗೆ ಬುನಾದಿ ಹಾಕುವ ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳು, ಸಹಪಾಠಿಗಳನ್ನು ಎಂದಿಗೂ ಮರೆಯಬಾರದು ಎಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ನಗರದ ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಂ.ಕೆ.ಹುಬ್ಬಳ್ಳಿಯ ಕಲ್ಮೇಶ್ವರ ಇಂಗ್ಲಿಷ್ ಹೈಸ್ಕೂಲ್ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ನಮಗೆ ಸಂಕಷ್ಟ ಬಂದಾಗ ಎಲ್ಲರಿಗಿಂತ ಮೊದಲು ಸಹಾಯಕ್ಕೆ ಸಹಪಾಠಿ ಗೆಳೆಯರೇ ಬರುತ್ತಾರೆ. ಹೀಗಾಗಿ ಕಲಿಯುವಾಗ ಸಿಕ್ಕ ಗೆಳೆಯರನ್ನು ನಾನು ಇಂದಿಗೂ ಮರೆತಿಲ್ಲ ಎಂದರು.

ಹೈಸ್ಕೂಲ್‌ನ ಹಿರಿಯ ಗುರು ಗಂಗಾಧರ ಕೋಟಗಿ ಮಾತನಾಡಿ, ಶಿಕ್ಷಕನಿಗೆ ನಿವೃತ್ತಿ ಎಂಬುದಿಲ್ಲ. ಗುರು-ಶಿಷ್ಯನ ಸಂಬಂಧ ಅಳೆಯಲೂ ಸಾಧ್ಯವಿಲ್ಲ. ಅದು ಎಲ್ಲಿಯವರೆಗೆ ಗಟ್ಟಿಯಾಗಿರುತ್ತದೋ ಅಲ್ಲಿಯವರೆಗೂ ಶಿಕ್ಷಕನ ಸೇವೆ ನಿರಂತರವಾಗಿರುತ್ತದೆ. ಕಲಿಸಿದ ಗುರುಗಳನ್ನು ಸ್ಮರಿಸಿಕೊಂಡು ಯಾವುದೇ ಕೆಲಸ ಮಾಡಿದರೂ ಆ ಕಾರ್ಯ ಸಿದ್ಧಿಯಾಗುತ್ತದೆ ಎಂದರು. ವಿವಿಧ ಕ್ಷೇತ್ರಗಳಲ್ಲಿನ ಸಾಧಕರು, ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರನ್ನು ಸತ್ಕರಿಸಲಾಯಿತು. ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಾಧ್ಯಕ್ಷ ದಿನೇಶ ಪಾಟೀಲ, ಎಸ್.ಎಸ್. ಗಂಗಾಧರಮಠ, ಜಿ.ಎಸ್. ಹಲಸಗಿ, ಎನ್.ಬಿ. ಬಳಿಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net