ಬಸವೇಶ್ವರರ ವಚನದ ಹಾದಿ ಅರಿಯಿರಿ

IMG-20250614-WA0206
ಅರಸೀಕೆರೆ ಗ್ರಾಮಾಂತರ ತಾಲೂಕಿನ ಬಾಣಾವರ ಹೋಬಳಿಯ ತೊಂಡಿಗನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶಿವಾನುಭವ ಗೋಷ್ಠಿಯನ್ನುಶ್ರೀ ಗುರು ಬಸವ ಸ್ವಾಮೀಜಿ ಉದ್ಘಾಟಿಸಿದರು. ಜಿವಿಟಿ ಬಸವರಾಜು ಪುಟ್ಟರಾಜ್ ಹೊಸುರು, ಷಡಕ್ಷರಯ್ಯ, ಕಾಂತರಾಜು, ಇತರರು ಹಾಜರಿದ್ದರು.
Published on

ಅರಸೀಕೆರೆ ಗ್ರಾಮಾಂತರ : 12ನೇ ಶತಮಾನದಲ್ಲಿ ವಿಶ್ವ ಗುರು ಬಸವಣ್ಣ ಅವರು ಸಾರಿರುವ ವಚನದ ಹಾದಿಯನ್ನು ಅರಿತು ಪರೋಪಕಾರಿಯಾಗಿ, ಸಮಾಜದ ಒಳಿತಿಗಾಗಿ ಮನುಜ ಬಾಳಬೇಕು ಎಂದು ಪಾಂಡುಮಟ್ಟಿ ಮಠದ ಶ್ರೀ ಡಾ.ಗುರು ಬಸವ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿಯ ತೊಂಡಿಗನಹಳ್ಳಿ ಗ್ರಾಮದ ಬಸವ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಗಮ ಶಿವಾನುಭವ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು .

ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಜಿವಿಟಿ ಬಸವರಾಜು ಮಾತನಾಡಿ, ಬಸವಣ್ಣನವರ ವಚನ ಸಾಹಿತ್ಯ ಅಧ್ಯಯನ ಶಿವಾಮೃತ ಇದ್ದಂತೆ. ನಾವು ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ ಎಂದು ಹೇಳಿದರು.

ಶರಣ ಪುಟ್ಟರಾಜು ಹೊಸೂರು ಇವರಿಂದ ಶಿವಾನುಭವ ಕುರಿತು ವಚನ ಸಾಹಿತ್ಯ ಮಂಡಿಸಿದರು. ಷಡಕ್ಷರಯ್ಯ, ಕಾಂತರಾಜು, ಧನಂಜಯ, ಲಯನ್ಸ್ ಕ್ಲಬ್ ಅರಸೀಕೆರೆ ಮಾಜಿ ಅಧ್ಯಕ್ಷ ಯೋಗೀಶ್ವರಾಚಾರ್ ಹಾಗೂ ಬಸವ ಮಂಟಪದ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net