ಸಂಸ್ಕೃತ ಕಲಿತು ಸುಸಂಸ್ಕೃತರಾಗಿ

sanskrith
Published on

ಮುಂಡರಗಿ: ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ಆವರಣದಲ್ಲಿರುವ ಸಂಸ್ಕೃತ ಪಾಠಶಾಲೆಯಲ್ಲಿ ಜಗದ್ಗುರು ಅನ್ನದಾನೀಶ್ವರ ಸಂಸ್ಕೃತ ಪಾಠ ಶಾಲೆ ಹಾಗೂ ಡಂಬಳ ಗ್ರಾಮದ ಜಗದ್ಗುರು ಅರ್ಧನಾರೀಶ್ವರ ಸಂಸ್ಕೃತ ಪಾಠ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ವಿಶ್ವ ಸಂಸ್ಕೃತ ದಿನ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಜಗದ್ಗುರು ಅನ್ನದಾನೀಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ವೆಂಕಟೇಶ ದಾಸಕನಕಪ್ಪನವರ ಮಾತನಾಡಿ, ಸಂಸ್ಕೃತ ಕಲಿತವರು ವ್ಯಕ್ತಿ ಸುಸಂಸ್ಕೃತರಾಗುತ್ತಾರೆ. ಮಕ್ಕಳು ಇತರೆ ಭಾಷೆಗಳ ಜತೆಗೆ ಸಂಸ್ಕೃತ ಕಲಿಯಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ಸಂಸ್ಕೃತದ ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಸಂಸ್ಕೃತ ಭಾಷೆಯ ಬಗ್ಗೆ ಅರಿವು ಮೂಡಿಸಲಾಯಿತು.

ಜಗದ್ಗುರು ಅರ್ಧನಾರೀಶ್ವರ ಸಂಸ್ಕೃತ ಪಾಠ ಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ ತಳವಾರ, ಜಗದ್ಗುರು ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಎಸ್.ಬಿ. ಹಳ್ಳಿಗುಡಿ, ಅನ್ನದಾನೀಶ್ವರ ಸಂಸ್ಕೃತ ಪಾಠ ಶಾಲೆ ನಿವೃತ್ತ ಮುಖ್ಯಶಿಕ್ಷಕ ಚನ್ನವೀರಯ್ಯ ಹಿರೇಮಠ, ಕೊಟ್ರಯ್ಯ ಹಿರೇಮಠ, ಪ್ರಶಾಂತ ಗುಡದಪ್ಪನವರ, ರಂಗಪ್ಪ ಕೋಳಿ ಇತರರು ಇದ್ದರು.

ಸಂಸ್ಕೃತ ಪಾಠ ಶಾಲೆಯ ಮುಖ್ಯಶಿಕ್ಷಕಿ ಸರೋಜಾ ಹಿರೇಮಠ ಪ್ರಾಸ್ತವಿಕವಾಗಿ ಮಾತನಾಡಿದರು. ಸಂಸ್ಕೃತ ಪಾಠ ಶಾಲೆಯ ಸಹ ಶಿಕ್ಷಕ ಹಾಲಯ್ಯ ಹಿರೇಮಠ ನಿರೂಪಿಸಿದರು. ಜ್ಯೋತಿ ಜೋಶಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net