ಕಲಿಕಾ ಮಟ್ಟ ಸುಧಾರಿಸಿಕೊಳ್ಳಲು ಅನುಕೂಲ

31 sirgere 01
ಸಿರಿಗೇರಿಯ ಸಹಿಪ್ರಾ ಶಾಲೆಯಲ್ಲಿ ಗ್ರಾಪಂ ಮಟ್ಟದ ಗಣಿತ ಕಲಿಕಾ ಆಂದೋಲನ ನಡೆಯಿತು. ಪಿಡಿಒ ಉಪ್ಪಾರ ರಾಮಪ್ಪ, ಮುಖ್ಯ ಶಿಕ್ಷಕರಾದ ಯೋಗೀಶ ಜಾಲಿ, ಬಿ.ಆರ್.ಶಿವಕುಮಾರ, ಗೋವಿಂದ್ ರಾಜ, ಕಾತ್ಯಾಯಿನಿ, ಸುಮಂಗಳ ಮೇಟಿ ಇತರರಿದ್ದರು.
Published on

ಸಿರಿಗೇರಿ: ಗ್ರಾಮ ಪಂಚಾಯತಿ ಮಟ್ಟದ 2024-25ನೇ ಸಾಲಿನ ಗಣಿತ ಕಲಿಕಾ ಆಂದೋಲನಕ್ಕೆ ಸಹಿಪ್ರಾ ಶಾಲೆಯಲ್ಲಿ ಗುರುವಾರ ಪಿಡಿಒ ಉಪ್ಪಾರ ರಾಮಪ್ಪ ಚಾಲನೆ ನೀಡಿದರು.

ನಂತರ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿಶೇಷವಾಗಿ ಗಣಿತ ವಿಷಯವನ್ನು ಸುಲಭವಾಗಿ ಕಲಿತವರಿಗೆ ವೇದಿಕೆ ಸಿಗಲಿದೆ. ನಿಮ್ಮ ಲೆಕ್ಕಾಚಾರದ ಜ್ಞಾನವನ್ನು ಇಲ್ಲಿ ಪರೀಕ್ಷೆ ಎದುರಿಸುವುದರ ಮೂಲಕ ಕಲಿಕಾ ಮಟ್ಟವನ್ನು ಹೆಚ್ಚಿಸಕೊಳ್ಳಬಹುದು ಎಂದರು.

ಸಿರಿಗೇರಿ ಗ್ರಾ.ಪಂ. ವ್ಯಾಪ್ತಿಯ ಶಾಲೆಗಳ 4,5 ಮತ್ತು 6ನೇ ತರಗತಿಗಳ ಒಟ್ಟು 300 ವಿದ್ಯಾರ್ಥಿಗಳು ಭಾಗವಹಿಸಿದ್ದರು. 4ನೇ ತರಗತಿ ವಿಭಾಗದಲ್ಲಿ ವಿದ್ಯಾರ್ಥಿಗಳಾದ ನಯನಾ ಪ್ರಥಮ ಸ್ಥಾನ, ಎನ್.ಪ್ರಭಾಸ್ ದ್ವಿತೀಯ , ರಶ್ಮಿತೃತೀಯ ಸ್ಥಾನಗಳಿಸಿದರು. 5ನೇ ತರಗತಿ ವಿಭಾಗದಲ್ಲಿ ಎಚ್.ಡಿ.ಶಾಂತಿ ಪ್ರಥಮ ಸ್ಥಾನ, ಕಾಳಿ ಶರತ್ ದ್ವಿತೀಯ, ಮುನೀಫ್ ತೃತೀಯ ಸ್ಥಾನಗಳಿಸಿದರು. 6ನೇ ತರಗತಿ ವಿಭಾಗದಲ್ಲಿ ಶಾಂತಿ ಪ್ರಥಮ ಸ್ಥಾನ, ಉಮಾ ಎನ್ ದ್ವಿತೀಯ,

ಎಲ್.ಬಿ. ಜೀವನ್ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಥಮ ಸ್ಥಾನ ಗಳಿಸಿದವರಿಗೆ 1000ರೂ. ಮತ್ತು ಪ್ರಶಸ್ತಿ ಪತ್ರ
ದ್ವಿತೀಯ ಸ್ಥಾನ ಪಡೆದವರಿಗೆ 600ರೂ, ತೃತೀಯ ಸ್ಥಾನ ಪಡೆದವರಿಗೆ 400ರೂ. ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.
ಪ್ರಮುಖರಾದ ಲಕ್ಷ್ಮಣ್ ಭಂಡಾರಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಚಿದಾನಂದ, ಶಿಕ್ಷಕರಾದ ಬಸವನಗೌಡ, ಬಿ ಬಿ ಫಾತಿಮಾ ಬೇಗಂ, ಉಮೇಶ, ಚೈತ್ರಾ, ಹನುಮಯ್ಯ, ಈರಣ್ಣ, ಜ್ಯೋತಿ, ಈರಮ್ಮ, ಚಾಂದನಿ, ಮಂಗಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net