ಭಾಷೆ, ಸಂಸ್ಕೃತಿ ಶಾಲಾ ಹಂತದಲ್ಲೇ ಕಲಿಯಿರಿ

22 LXR-4
ಲಕ್ಷ್ಮೇಶ್ವರದಲ್ಲಿ ತಾಲೂಕು ಕಸಾಪ ಘಟಕದಿಂದ ಸರ್ಕಾರಿ ಪಪೂ ಕಾಲೇಜು ಘಟಕದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
Published on

ಲಕ್ಷ್ಮೇಶ್ವರ: ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕನ್ನಡತನವನ್ನು ಶಾಲಾ- ಕಾಲೇಜು ಹಂತದಲ್ಲಿಯೇ ಅಂತರ್ಗತಗೊಳಿಸಬೇಕು. ಈ ಹಿನ್ನೆಲೆಯಲ್ಲಿ ಕಸಾಪ ತಾಲೂಕು ಘಟಕ ಉತ್ತಮ ಕಾರ್ಯಮಾಡುತ್ತಿದೆ ಎಂದು ತಾಪಂ ಮಾಜಿ ಸದಸ್ಯ ಚನ್ನಬಸಪ್ಪ ಜಗಲಿ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪಪೂ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸದಲ್ಲಿ ಕಸಾಪ ಕಾಲೇಜು ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ದತ್ತಿ ದಾನಿ ಮಹೇಶ ಸೋಮಕ್ಕನವರ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಜನೆ ಜತೆಗೆ ಕನ್ನಡ ಸಾಹಿತ್ಯ, ಸಂಸ್ಕೃತಿ ಅರಿಯಬೇಕು. ಕನ್ನಡ ಸಾಹಿತ್ಯದ ಸೊಬಗು ಹೆಚ್ಚಿಸುವ ಜನಪದವು ಸಾಹಿತ್ಯದ ಬೇರಾಗಿದ್ದು, ವಿದ್ಯಾರ್ಥಿಗಳಿಗೆ ಜನಪದ ಹಾಡು, ಆಚರಣೆ, ಪದ್ಧತಿಗಳ ಬಗ್ಗೆ ತಿಳಿದಿರಬೇಕು ಎಂದರು.

ಕಸಾಪ ತಾಲೂಕು ಘಟಕದ ಅಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿದರು. ಪ್ರತಿಮಾ ಮಹಾಜನಶೆಟ್ಟರ, ಸಾಹಿತಿ ಮೈತ್ರಾದೇವಿ ಹಿರೇಮಠ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯ ಕುಬೇರಪ್ಪ ಸಿದ್ರಾಮಣ್ಣವರ, ಗಂಗಾಧರ ಮೆಣಸಿನಕಾಯಿ ಮಾತನಾಡಿದರು. ದುಂಡೇಶ ಕೊಟಗಿ, ಉಪನ್ಯಾಸಕ ನಾಗಪ್ಪ ಸಾತಪುತೆ, ಭಾಗ್ಯಲಕ್ಷ್ಮಿ, ಎಸ್.ವೈ. ಹೂಗಾರ, ರಾಜು ಜನಿವಾರದ ಇದ್ದರು. ಉಪನ್ಯಾಸಕರಾದ ಮಂಜುನಾಥ ಕೊಕ್ಕರಗುಂದಿ ಕಸಾಪ ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ, ಈರಣ್ಣ ಗಾಣಿಗೇರ, ಎನ್.ಪಿ. ಪ್ಯಾಟಿಗೌಡ್ರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net