

ಸಿರಗುಪ್ಪ: ಬಡ್ಡಿ ಲೆಕ್ಕಾಚಾರ, ಡಿಜಿಟಲೀಕರಣದ ಮೂಲಕ ಪ್ರಗತಿನಿಧಿ ವಿತರಣೆಯ ಹಂತಗಳ ಕುರಿತು ಮಾಹಿತಿ ತಿಳಿದುಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸುಧೀರ್ ಹಂಗಳೂರು ಹೇಳಿದರು. ಪಟ್ಟಣದಲ್ಲಿ ಯೋಜನೆ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕಿನ ಸೇವಾಪ್ರತಿನಿಧಿಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ವಿಶೇಷ ಅಭಿಯಾನದಡಿ ಟಾಸ್ಕ್‌ಗಳನ್ನು ಎಸ್ಪಿ ಆಪ್ಲಿಕೇಷನ್ ಮೂಲಕ ಎಂಟ್ರಿ ಮಾಡುವುದು ಹಾಗೂ ಅನುಸರಿಸುವ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಯೋಜನಾಧಿಕಾರಿ ಬಸವರಾಜ ಒಡೆಯರ್, ವಿಮೆ ಸಮನ್ವಯಾಧಿಕಾರಿ ಮಹಮ್ಮದ್ ಅಲಿ, ವಲಯ ಮೇಲ್ವಿಚಾರಕರು, ತಾಲೂಕಿನ ಹಣಕಾಸು ಪ್ರಬಂಧಕರು ಇತರರಿದ್ದರು.