ಬಸವಣ್ಣನವರ ವಿಚಾರ ಧಾರೆ ಅರಿಯಿರಿ

19 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮರ್ಥ ಪ್ರಜಾಪ್ರಭುತ್ವದ ಜತೆಗೆ ಪ್ರಜ್ಞಾ ಪ್ರಭುತ್ವದ ಅಗತ್ಯವನ್ನು ಅರಿತು 12ನೇ ಶತಮಾನದಲ್ಲಿ ಹುಟ್ಟು ಹಾಕಿದ ಅನುಭವ ಮಂಟಪದ ಉದ್ದೇಶಗಳು ಇಂದಿಗೆ ಪ್ರಸ್ತುತವಾಗಿವೆ ಎಂದು ಬೆಂಗಳೂರಿನ ಬಸವ ಸಮಿತಿ ಅಧ್ಯ ಡಾ. ಅರವಿಂದ ಜತ್ತಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಶ್ರೀ ಬಸವೇಶ್ವರ ಪೀಠ ಹಾಗೂ ಕೃಷಿ ವಿವಿ ಆಶ್ರಯದಲ್ಲಿ ಕೃವಿವಿ ಪ್ರೇಾಗೃಹದಲ್ಲಿ ಸೋಮವಾರ ಏರ್ಪಡಿಸಿದ್ದ ವಚನಗಳಲ್ಲಿ ವ್ಯಕ್ತಿತ್ವ ವಿಕಾಸ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಬಸವಣ್ಣನವರು ತಮ್ಮ ವಚನಗಳ ಮೂಲಕ ವೈಜ್ಞಾನಿಕ ಚಿಂತನೆಗಳನ್ನು ನೀಡಿದ್ದು, ಬಸವಣ್ಣನವರ ವಿಚಾರ ಧಾರೆಗಳನ್ನು ಇಂದಿನ ವಿದ್ಯಾಥಿರ್ಗಳು ಅರಿಯಬೇಕಾಗಿದೆ. ದೇಹ, ಮನಸ್ಸು ಮತ್ತು ಚೈತನ್ಯದ ಮೂಲಕ ಪರಿವರ್ತನೆ ಹೊಂದಲು ಕಾರಣವಾಗಿದೆ. ಪ್ರಸ್ತುತ ವಿದ್ಯಾಥಿರ್ಗಳಲ್ಲಿ ಪರಿವರ್ತನೆ ಬರಬೇಕಾದರೆ ಅದಕ್ಕೆ ಸುಲಭ ಪರಿಹಾರ ಶರಣರ ವಚನಗಳೇ ಮಾರ್ಗದಶಿರ್. ಇಂದಿನ ವಿಶ್ವವಿದ್ಯಾಲಯಗಳು ಅನುಭವ ಮಂಟಪದ ತರಹ ಅರಿವು, ಜ್ಞಾನವನ್ನು ನೀಡುವ ಕೇಂದ್ರಗಳಾಗಬೇಕು. ವಿಶ್ವ ವಿದ್ಯಾಲಯಗಳಲ್ಲಿ ಗಂಭೀರ ಅಧ್ಯಯನಗಳು ನಡೆಯಬೇಕು ಎಂದರು.
ವಿಜಯಲಕ್ಷಿ$್ಮ ಆರ್​. ಮಾತನಾಡಿ, ಬಸವಣ್ಣ ಮತ್ತು ಅವರ ಸಮಕಾಲಿನ ಶರಣರ ವಚನಗಳು ಜೀವನದ ಮೌಲ್ಯ ತಿಳಿಯಲು ಸಹಕಾರಿ. ಪರಿರ್ಪೂಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಮಹಾತ್ಮರ ವಚನಗಳು ದಾರಿದೀಪ ಆಗಿವೆ ಎಂದರು.
ಡಾ.ಸಿ.ಎಂ.ಕುಂದಗೋಳ ಮಾತನಾಡಿ, ವ್ಯಕ್ತಿತ್ವ ವಿಕಾಸ ಇದೊಂದು ಅಂತರಂಗದ ವಿಕಾಸವಾಗಿದೆ. ಶರಣರ ವಚನಗಳಲ್ಲಿ ಮನುಷ್ಯ ವ್ಯಕ್ತಿತ್ವ ವಿಕಸನದ ಮಾರ್ಗಗಳು ಹೊಂದಿವೆ. ವಿದ್ಯಾಥಿರ್ಯ ಮನಸ್ಸು ಒಂದು ಲವತ್ತಾದ ಭೂಮಿಯಂತೆ. ಹಾಗಾಗಿ ವಿದ್ಯಾಥಿರ್ಗಳ ಮನಸ್ಸುಗಳಲ್ಲಿ ಮಾನವೀಯ ಮೌಲ್ಯ ಬಿತ್ತಬೇಕಿದೆ. ಋಣಾತ್ಮಕ ಚಿಂತನೆಗಳನ್ನು ಹೋಗಲಾಡಿಸಲು ವಚನಕಾರರ ವಚನಗಳಲ್ಲಿರುವ ಜೀವನದ ಸಂದೇಶ ಸಾರ ಬಹಳ ಮುಖ್ಯವಾಗಿದೆ ಎಂದರು.
ಕೃವಿವಿ ಕುಲಪತಿ ಡಾ. ಪಿ.ಎಲ್​. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಥಿರ್ಗಳು, ಪ್ರಾಧ್ಯಾಪಕರು, ಸಂಶೋಧಕರು, ಇತರರು ಇದ್ದರು. ಡಾ. ಎಚ್​.ಬಿ. ಬಬಲಾದ ಸ್ವಾಗತಿಸಿದರು. ಡಾ. ಎಸ್​.ಎಂ. ಮುಂದಿನಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net