

ಚಿಕ್ಕಮಗಳೂರು: ನಾಡಿನ ಹೆಸರಾಂತ ರಂಗಭೂಮಿ ಕಲಾವಿದೆ ನಾಯಕ ನಟಿ ಅಕ್ಷತಾ ಪಾಂಡವಪುರ ಅವರು ರಚಿಸಿ, ವಿನ್ಯಾಸಗೊಳಿಸಿ, ನಿರ್ದೇಶಿಸಿ ಅಭಿನಯಿಸುತ್ತಿರುವ ಲೀಕ್‌ಔಟ್ ಎಂಬ ಏಕ ವ್ಯಕ್ತಿ ನಾಟಕ ಪ್ರದರ್ಶನವು ಆ.೧೯ ರಂದು ನಗರದ ಕಾಳಿದಾಸ ನಗರದಲ್ಲಿರುವ ರೇಡಿಯಂಟ್ ಕಿಡ್ಸ್ ಶಾಲೆಯ ಸಭಾಂಗಣದಲ್ಲಿ ಸಂಜೆ ೬ ಗಂಟೆಗೆ ಏರ್ಪಡಿಸಲಾಗಿದೆ ಎಂದು ಹರಿಓಂ ಬಿಲ್ರ‍್ಸ್ನ ಮುಖ್ಯಸ್ಥ ಜಿ.ರಮೇಶ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಲ್ಕಟ್ಟೆ ಪುಸ್ತಕದ ಮನೆ, ಕುವೆಂಪು ವಿದ್ಯಾನಿಕೇತನ, ಹರಿಓಂ ಬಿಲ್ರ‍್ಸ್ ಸಂಯುಕ್ತಾಶ್ರಯದಲ್ಲಿ ಈ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ನಾಟಕದ ೯೮ ನೇ ಪ್ರದರ್ಶನ ಇದಾಗಿದೆ. ಸ್ತಿçà ಸಂವೇದನಾ ಧ್ವನಿಯಿಂದ ಈಗಾಗಲೇ ಆಪ್ತರಂಗ ಪ್ರಯೋಗ ನಾಡಿನಾದ್ಯಂತ ಹೆಸರು ಮಾಡಿದ್ದು, ಕುವೆಂಪು ವಿದ್ಯಾನಿಕೇತನದ ಸ್ಥಾಪಕ ಕೆ.ಸಿ ಶಂಕರ್, ಕಲ್ಕಟ್ಟೆ ಪುಸ್ತಕದ ಮನೆಯ ಸ್ಥಾಪಕಿ ರೇಖಾ ನಾಗರಾಜ ರಾವ್ ನಾಟಕವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಪ್ರೇಕ್ಷಕರೇ ಪಾತ್ರಗಳಾಗುವ ಈ ರಂಗ ಪ್ರಯೋಗಕ್ಕೆ ಖ್ಯಾತ ವಿಮರ್ಶಕರುಗಳು ಹೆಚ್ಚಿನ ಮೆಚ್ಚಿಗೆ ವ್ಯಕ್ತಪಡಿಸಿದ್ದು, ಅಕ್ಷತಾ ಪಾಂಡವಪುರ ಅವರು ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದ ಬಳಿಕ ದೆಹಲಿಯ ನಾಟಕ ಶಾಲೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದಿದ್ದಾರೆ. ಬಳಿಕ ಪೂರ್ಣಾವಧಿ ನಟಿಯಾಗಲು ನಿರ್ಧರಿಸಿ ಒಬ್ಬಳು ಎಂಬ ಏಕ ವ್ಯಕ್ತಿ ರಂಗ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಪಲ್ಲಟ, ಪಿಂಕಿ ಎಲ್ಲಿ? ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೋಳಿ ಎಸರು ಸಿನಿಮಾ ಇವರಿಗೆ ಅಪಾರ ಮನ್ನಣೆ ತಂದುಕೊಟ್ಟಿದೆ ಎಂದು ಮಾಹಿತಿ ನೀಡಿದರು.
ಲೀಕ್‌ಔಟ್ ನಾಟಕ ಸಹ ಅಕ್ಷತಾ ಅವರು ಬರೆದಿರುವ ಕಥಾ ಸಂಕಲನಗಳಿAದ ಆಯ್ದ ರಂಗ ಪ್ರಯೋಗವಾಗಿದೆ. ನಾಟಕದ ಉಚಿತ ಪ್ರದರ್ಶನ ಇದಾಗಿದ್ದು, ನಗದ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕವನ್ನು ವೀಕ್ಷಿಸಿ ಕಲಾವಿದೆಯನ್ನು ಪ್ರೋತ್ಸಾಹಿಸಿಬೇಕು ಎಂದು ಮನವಿ ಮಾಡಿದರು.