

ಅನ್ಸಾರ್ ಇನೋಳಿ ಉಳ್ಳಾಲ
ಜೋರಾಗಿ ಬಳೆ ಬಂದರೆ ಸೋರುವ ಕಟ್ಟಡ, ಸುತ್ತಲೂ ಆಹಾರ ಸಾಮಗ್ರಿಗಳ ಕಟ್ಟುಗಳು, ಇವುಗಳ ನಡುವೆ ಪುಟಾಣಿಗಳು. ಇಕ್ಕಟ್ಟಿನ ಜಾಗದಲ್ಲಿ ಅಸ್ತವ್ಯಸ್ತ ಸ್ಥಿತಿಯಲ್ಲಿ ಕಟ್ಟಡ. ಇದು ಪಾನೀರ್ ಅಂಗನವಾಡಿ ಕೇಂದ್ರದ ದುಸ್ಥಿತಿ.
ಪಾನೀರ್ ಅಂಗನವಾಡಿ ಕಟ್ಟಡ ಸುಮಾರು 28 ವರ್ಷಗಳ ಹಿಂದೆ ಅನುದಾನಿತ ಶಾಲಾ ಕಟ್ಟಡದಲ್ಲಿ ಆರಂಭಿಸಲಾಗಿತ್ತು. ಧಾರ್ಮಿಕ ಸಂಸ್ಥೆಯೊಂದು ನಿರ್ಮಿಸಿದ ಹೆಂಚಿನ ಮೇಲ್ಛಾವಣಿ ಹೊಂದಿರುವ ಕಟ್ಟಡದಲ್ಲಿ ಪ್ರಸ್ತುತ 19 ಪುಟಾಣಿಗಳಿದ್ದಾರೆ. ಈ ಬಾರಿ ಸುರಿದ ಭಾರಿ ಮಳೆಯ ಪರಿಣಾಮ ನೀರು ಒಳಬಂದು ಪುಟಾಣಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿನ ಅಡುಗೆ ಕೋಣೆ ತೀರ ಕಿರಿದಾಗಿರುವುದರಿಂದ ಮೊಟ್ಟೆ ಹಾಗೂ ಇತರ ಆಹಾರ ಸಾಮಗ್ರಿಗಳನ್ನು ಇಡಲು ಸಾಧ್ಯವಾಗದೆ ಮಕ್ಕಳು ಕೂರುವಲ್ಲೇ ಬೆಂಚಿನ ಮೇಲೆ ಸುತ್ತಲೂ ಇಡಲಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಸಹಾಯಕಿಯೂ ಇಲ್ಲದ ಕಾರಣ ಎಲ್ಲ ಕೆಲಸ ಶಿಕ್ಷಕಿಯೇ ಮಾಡಬೇಕಿದೆ.
ಜಮೀನು ಕೊರತೆ: ಅಂಗನವಾಡಿ ಕಟ್ಟಡ ಖಾಸಗಿ ಅಧೀನದಲ್ಲಿ ಇರುವುದರಿಂದ ಸರ್ಕಾರದ ಅನುದಾನ ಬಳಸುವಂತಿಲ್ಲ. ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರಿ ಜಮೀನಿನ ಕೊರತೆ ಕಾಡಿದೆ. ಈ ನಿಟ್ಟಿನಲ್ಲಿ ಕೋಟೆಕಾರ್ ಪಪಂಯಿಂದ ಸರ್ವೇ ನಂಬರ್ 226ರಲ್ಲಿ 6.09 ಎಕರೆ ಸರ್ಕಾರಿ ಜಮೀನು ಗುರುತಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ದಾಖಲೆ ಇಲಾಖೆಗೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಇಂತಿಷ್ಟು ಜಮೀನು ಸರ್ಕಾರಿ ಮಟ್ಟದಲ್ಲಿ ಅಂಗನವಾಡಿ ಹೆಸರಿಗೆ ಮಾಡಿಸಿ ಕೊಡುವ ಕಾರ್ಯ ಅಧಿಕಾರಿಗಳಿಂದ ನಡೆಯಬೇಕಿದೆ. ಇದಕ್ಕೆ ಸಂಬಂಧ ಇಲಾಖೆ ಅಧಿಕಾರಿಗಳ ಚುರುಕಿನ ಕಾರ್ಯನಿರ್ವಣೆ ಅಗತ್ಯವಿದೆ.
ಪಪಂ ಸ್ಥಳೀಯ ಸದಸ್ಯರು ನೀಡಿರುವ ಸರ್ವೇ ನಂಬರ್‌ನಲ್ಲಿ ಅಂಗನವಾಡಿಗೆ ಜಮೀನು ಮೀಸಲಿರಿಸಿ ಆರ್‌ಟಿಸಿ ಮಾಡುವಂತೆ ತಹಸೀಲ್ದಾರ್‌ಗೆ ಕಳಿಸಲಾಗಿತ್ತು, ಆದರೆ ಅದು ಸರ್ಕಾರಿ ಜಾಗ ಅಲ್ಲ ಎಂದು ಬಂದಿದ್ದು ಇನ್ನೊಂದು ಜಾಗ ಗುರುತಿಸಿ ಕಳಿಸಲಾಗಿದೆ. ಶಂಕರಿ, ಅಂಗನವಾಡಿ ಮೇಲ್ವಿಚಾರಕಿ ಫ್ಯಾನ್ ಸಹಿತ ಅಗತ್ಯ ವ್ಯವಸ್ಥೆ ದಾನಿಗಳ ಸಹಕಾರದಿಂದ ಮಾಡಲಾಗಿದೆ. ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಮಸ್ಯೆ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಸರ್ಕಾರಿ ಜಮೀನಿನ ಸರ್ವೇ ನಂಬರ್ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನೀಡಲಾಗಿದೆ. ಹರೀಶ್ ರಾವ್, ಸದಸ್ಯ, ಕೋಟೆಕಾರ್ ಪಪಂ 28 ವರ್ಷಗಳ ಹಿಂದೆ ನಾವೇ ಅಂಗನವಾಡಿಗೆ ಕಟ್ಟಡ ನಿರ್ಮಿಸಿಕೊಟ್ಟಿದ್ದು ಈಗಲೂ ಅದೇ ಕಟ್ಟಡದಲ್ಲಿದೆ. ವಿದ್ಯುತ್ ಸಹಿತ ಅಗತ್ಯ ವ್ಯವಸ್ಥೆ ನಾವೇ ಕಲ್ಲಿಸಿದ್ದೇವೆ. ಈ ಬಾರಿ ಮಳೆ ಹೆಚ್ಚಿದ್ದ ಕಾರಣ ಸಮಸ್ಯೆ ಎದುರಾಗಿದೆ. ಸದ್ಯಕ್ಕೆ ಮೇಲ್ಛಾವಣಿ ಕೆಲಸ ಕಷ್ಟ, ಮಳೆ ಕಡಿಮೆಯಾದ ಕೂಡಲೇ ನಾಗರಿಕ ಸಮಿತಿಯಿಂದ ನವೀಕರಣ ಮಾಡಲಾಗುವುದು. ಆಲ್ವಿನ್ ಡಿಸೋಜ ರಾಜ್ಯಾಧ್ಯಕ್ಷ, ಆಲ್ ಇಂಡಿಯಾ ಕೆಥೊಲಿಕ್ ಯೂನಿಯನ್ https://www.vijayavani.net/linguistic-harassment-in-border-schools https://www.vijayavani.net/ujire-rubber-society-profits-rs-29-lakh